ಅದ್ದೂರಿ ಸ್ವಾತಂತ್ರೋತ್ಸವ

238

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ:ನಗರದ ಭಗತ್ ಸಿಂಗ್ ಮೈಧಾನದಲ್ಲಿ 71ನೇ ಸ್ವಾತಂತ್ರೋತ್ಸ ವವನ್ನು ಅದ್ದೂರಿಯಾಗಿ ಆಚರಿಸ ಲಾಯಿತು.ದೇಶದ ಹಬ್ಬದಲ್ಲಿ ಶಾಸಕ ವೆಂಕಟರಮಣಯ್ಯ, ಜಿಲ್ಲಾ ಉಪ ವಿಭಾಗಾಧಿಕಾರಿ ಮಹೇಶ್ ಬಾಬು, ತಹಶಿಲ್ದಾರ್ ಮೋಹನ್ ಸೇರಿ ತಾಲೂಕಿನ ಗಣ್ಯರು ಭಾಗವಹಿಸಿದ್ದರು. ಧ್ವಜಾರೋಹಣ ಮಾಡಿ ಮಾತನಾಡಿದ ಶಾಸಕರು ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ದೇಶ, ರಾಜ್ಯ, ಜಿಲ್ಲೆ, ತಾಲ್ಲೂಕು ಹೀಗೆ ನಮ್ಮ ನಾಡಿನ ಬಗ್ಗೆ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಇನ್ನು ನಗರದ ಯುವಕರ ತಂಡ ಒಂದು ಬೃಹತ್ ರಾಷ್ಟ್ರ ಧ್ವಜವನ್ನು ನಗರದಾದ್ಯಂತ ಸಂಚರಿಸಿ ಕೊನೆಗೆ ಮೈದಾ‌ನಕ್ಕೆ ಆಗಮಿಸಿತು. ಈ ವೇಳೆ ಎಲ್ಲಾ ಗಣ್ಯರು ಎದ್ದು ನಿಂತು ಸ್ವಾಗತಿಸಿದರು. ಇನ್ನೂ ಶಾಲಾ ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮಗಳು ದೇಶ ಪ್ರೇಮವನ್ನು ಸಾರಿದವು.

ವಿಶೇಷವಾಗಿ ನಗರದ ಮಂದಿರ, ಮಸೀದು. ಆಟೋ ನಿಲ್ದಾಣ, ಸಂಘ ಸಂಸ್ಥೆಗಳಲ್ಲಿ ಸೇರಿದಂತೆ ಹಲವುಕಡೆ ಮುಂಜಾನೆಯಿಂದಲೇ ಸ್ವಾತಂತ್ರೋತ್ಸವನ್ನು ಶಿಸ್ತು ಭದ್ದವಾಗಿ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದ ಸಮಾಜದ ಎಲ್ಲ ಸಮುದಾಯದ ಮತ್ತು ಉತ್ಸಾಹದಿಂದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದ ಮುಸ್ಲೀಮ್ ಭಾಂಧವರಿಗೆ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ತಹಶಿಲ್ದಾರ್ ಮೋಹನ್ ಆತ್ಮೀಯವಾಗಿ ಅಭಿನಂದನೆಗಳನ್ನು ಸಲ್ಲಿಸಿ ಶ್ಲಾಘಿಸಿದರು.