ಬೆಳ್ಳಂದೂರಿನಲ್ಲಿ ಮತ್ತೆ ಹೆಚ್ಚಾದ ನೊರೆ.

218

ಬೆಂಗಳೂರು/ಮಹದೇವಪುರ:- ಕಳೆದ ಎರಡು ದಿನಗಳಿಂದ ಬೆಂಗಳೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ಕೆರೆಯ ಕೊಡಿ ಹಾಗೂ ಯಮಲೂರು ಕೋಡಿಯಲ್ಲಿ ಶೇಖರಣೆಯಾದ ನೋರೆ ಪ್ರಮಾಣ ಹೆಚ್ಚಾಗಿದೆ. ಬೆಳ್ಳಂದೂರು ಕೋಡಿಯಲ್ಲಿ ನೊರೆ ರಸ್ತೆಗೆ ಬಾರದಂತೆ ೨೦ ಅಡಿ ಎತ್ತರ ಕಬ್ಬಿಣದ ಮೆಷ್ ಅಳವಡಿಸಿದ್ದರು ಕೆರೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಬಿಳಿ ಮೋಡಗಳಂತೆ ನೊರೆ ಶೇಖರಣೆಯಾಗಿದೆ. ಕೆಲವೊಮ್ಮೆ ಜೋರಾಗಿ ಗಾಳಿ ಬೀಸಿದಾಗ ನೊರೆ ರಸ್ತೆಗೆ ಹಾರಿ ಬರುವುದರಿಂದ ವಾಹನ ಸವಾರರು ನೊರೆಯಲ್ಲಿ ಸ್ನಾನ ಮಾಡಿಕೊಂಡು ಸಂಚರಿಸುವಂತಾಗಿದೆ. ಇದರಿಂದಾಗಿ ಬೆಳ್ಳಂದೂರು ಕೊಡಿ, ಯಮಲೂರು ಹಾಗೂ ವರ್ತೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ದುರ್ವಾಸನೆ ಬೀರುತ್ತಿರುವುದರ ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿ
ಜನರು ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿ ಜೀವಿಸುವಂತಾಗಿದೆ.