ಅಂಚೆ ಸೇವಕರ ಸಂಘದವರಿಂದ ರಸ್ತೆತಡೆ ,ಪ್ರತಿಭಟನೆ

293

ಮಂಡ್ಯ/ಮಳವಳ್ಳಿ:ಏಳನೇ ವೇತನ ಆಯೋಗವನ್ನು ಕೂಡಲೇ ಜಾರಿ ಮಾಡಬೇಕೆಂದು ಹಾಗೂ ವಿವಿದ ಬೇಡಿಕೆಗಳನ್ನು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಮಳವಳ್ಳಿ ಪಟ್ಟಣದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ನಿನ್ನೆಯಿಂದ ಅಂಚೆ ಕಚೇರಿ ಮುಂಭಾಗ ಅನಿರ್ಧಿಷ್ಟ ಅವಧಿ ಮುಷ್ಕರ ನಡೆಸುತ್ತಿದ್ದು ಇಂದು ತೀವ್ರಗೊಂಡ ಮುಷ್ಕರ ಅನಂತರಾಂ ವೃತ್ತದಲ್ಲಿ ರಸ್ತೆ ತಡೆ ಮುಂದಾದರು. GDS ಕಮಿಟಿ ಯ ವರದಿಯನ್ನು ನಾವು ಕೊಟ್ಟಿರುವ ಮಾರ್ಪಾಡುಗಳೊಂದಿಗೆ ಜಾರಿಗೆ ತರಬೇಕು , ಪಿಂಚಣಿ ವ್ಯವಸ್ಥೆಮಾಡಬೇಕು. ನೌಕರರ ಮೇಲಿನ ದೌರ್ಜನ್ಯ ವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸೋಮಶೇಖರ್, ಜನನ ಕಾರ್ತಿಕ್, ಸೂರ್ಯಪ್ರಕಾಶ್, ಮಕ್ತರ್ ಪಾಷ, ಪುಟ್ಟಸ್ವಾಮಿ, ಬಸವರಾಧ್ಯ, ವೆಂಕಟೇಶ, ಮಹೇಂದ್ರ, ಮಾಲಿಂಗ ಶೆಟ್ಟಿ, ಅನುಸೂಯ, ಸುಮಿತ್ರ.ಕುಮಾರ ಸೇರಿದಂತೆ ಮತ್ತಿತ್ತರರು ಇದ್ದರು