ಹಂಪಿ ಹೇಮಕೂಟ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯ

401

ಬಳ್ಳಾರಿ /ಹೊಸಪೇಟೆ:ವಿಶ್ವ ಪಾರಂಪರಿಕ ನಡಿಗೆ ನಿಮಿತ್ತವಾಗಿ ಐತಿಹಾಸಿಕ ಹಂಪಿಯ ಹೇಮಕೂಟ ಪ್ರದೇಶದ ಸ್ಮಾರಕ ಬಳಿ ಭಾರತೀಯ ಸರ್ವೇಕ್ಷಣಾ ಇಲಾಖೆ ಪುರಾತತ್ವ ಇಲಾಖೆ ವತಿಯಿಂದ ಶುಕ್ರವಾರ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಪುರಾತತ್ವ ಅಧೀಕ್ಷಕಿ ಕೆ.ಮೂರ್ತೇಶ್ವರಿ ನೇತೃತ್ವದಲ್ಲಿ ಹೇಮಕೂಟ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯವನ್ನು ನಡೆಸಲಾಯಿತು. ಪುರಾತತ್ವ ಅಧೀಕ್ಷಕಿ ಕೆ.ಮೂರ್ತೇಶ್ವರಿ ಮಾತನಾಡಿ, ನವೆಂಬರ್ ತಿಂಗಳಲ್ಲಿ ನಡೆಯುವ ವಿಶ್ವ ಹೇರಿಟೇಜ್ ನಡಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷಯಿದ್ದು, ಇದರ ನಿಮಿತ್ತ ಪ್ರವಾಸಿ ಪ್ರಸಿದ್ದ ಹಂಪಿಯ ಹೇಮಕೂಟ ಪ್ರದೇಶದ 33 ಸ್ಮಾರಕರ ಸ್ವಚ್ಚತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ನಂವೆಂಬರ್ ತಿಂಗಳಲ್ಲಿ ರಾಜ್ಯದ ಹಲವೆಡೆಗಳಿಂದ ಆಗಮಿಸಿದ ಪ್ರವಾಸಿಗರಿಂದ, ಗಣ್ಯರಿಂದ ಎರಿಟೇಜ್ ನಡಿಗೆ ಸುಮಾರು ಒಂದು ವಾರ ಇರುತ್ತದೆ. ಹಾಗಾಗಿ ಈ ಪ್ರದೇಶವನ್ನು ಸೂಚಿಯಾಗಿಡಲು ಎಲ್ಲ ತರಹದ ಸಿದ್ದತೆ ಮಾಡಲಾಗಿದೆ. ಸದ್ಯ ಹೇಮಕೂಟ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಚತೆ ಮಾಡಿದ್ದು, ಇದಕ್ಕೆಲ್ಲಾ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಾಗೂ ದಿನ ಗೂಲಿ ಕಾರ್ಮಿಕರ ಸಹಕಾರ ಅಮುಲ್ಯವಾಗಿದೆ ಎಂದರು.
ಇದೇ ವೇಳೆ ಈ ಪ್ರದೇಶದಲ್ಲಿ ಚಿಕ್ಕ ಮಂಟಪವೊಂದು ಪತ್ತೆಯಾಗಿದೆ. ಗಿಡ ಮರ- ಮುಳ್ಳು ಕಂಟಿಗಳಿಂದ ಮಂಟಪ ಮುಚ್ಚಿಕೊಂಡು ಕಾಣಸಿಗದಂತಾಗಿತ್ತು. ಇದೀಗ ಬೆಳಕಿಗೆ ಬಂದಿದೆ. ಇದರಲ್ಲಿನ ಕಂಬಗಳು ಸಹ ನೆಲಕ್ಕೂರಳಿದ್ದು ಸರಿಪಡಿಸಿ ಹೇಮಕೂಟದ ಮೇಲಿನ ಮಂಟಪಕ್ಕೆ ತೆರಳಲು ದಾರಿ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಅಧಿಕಾರಿಗಳಾದ ಸೋಮ್ಲನಾಯ್ಕ್, ಎನ್. ತೇಜಸ್ವಿ, ಎನ್.ಎಚ್.ರವೀಂದ್ರ, ಸುನೀಲ್ ಹಾಗೂ ಸಿಬ್ಬಂಧಿಗಳಿದ್ದರು