ರಂಗಕರ್ಮಿ ನಿಧನಕ್ಕೆ ಕಂಬನಿ ಮಿಡಿದ ಸಂಸದ..

278

ಬಳ್ಳಾರಿ /ಬಳ್ಳಾರಿ;ರಂಗಕರ್ಮಿ ಏಣಗಿ ಬಾಳಪ್ಪ ನಿಧನಕ್ಕೆ ಕಂಬನಿ ಮಿಡಿದ ಸಂಸದ ಬಿ.ಶ್ರೀರಾಮುಲು-ಮೇರು ನಟ ಡಾ.ರಾಜ್ ಅವರಂತೆ ಸಂತನಂತೆ ಬದುಕಿದ ಏಣಗಿ ಬಾಳಪ್ಪ-ಅವರ ಆತ್ಮಕ್ಕೆ ಶಾಂತಿ ಲಭಿಸಲಿ-ಬಳ್ಳಾರಿಯಲ್ಲಿ ಹೇಳಿಕೆ

ಜೀವನದುದ್ದಕ್ಕೂ ಸಂತನಂತೆ ಬದುಕಿ ರಂಗಕಲೆ, ಸಿನೇಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಏಣಗಿ ಬಾಳಪ್ಪ ಅವರ ನಿಧನದಿಂದ ರಂಗ ಕಲೆ ಮತ್ತು ಸಿನೇಮಾ ಕ್ಷೇತ್ರ ಬಡವಾಗಿದೆ ಎಂದು ಸಂಸದ ಬಿ.ಶ್ರೀರಾಮುಲು ಕಂಬನಿ ಮಿಡಿದಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಜೊತೆ ಜನುಮದ ಜೋಡಿ ಚಿತ್ರದಲ್ಲಿ ನಟಿಸಿ ಸಂತನಂತೆ ಕ್ರಾಂತಿ ಮೂಡಿಸಿದ್ರು. ಬಾಲ್ಯದಿಂದಲೂ ರಂಗಕಲೆ, ಬಯಲಾಟದಲ್ಲಿ ಆಸಕ್ತಿ ಹೊಂದಿದ್ದ ಅವರು, ಸ್ವಂತ ನಾಟಕ ಮಂಡಳಿ ಹುಟ್ಟುಹಾಕಿದ್ದರು.

ಅವರ ನಿಧನದಿಂದ ರಂಗಕ್ಷೇತ್ರ ನಿಜಕ್ಕೂ ಬಡವಾಗಿದೆ. 105 ವರ್ಷಗಳ ಕಾಲ ತುಂಬು ಜೀವನ ನಡೆಸಿದ್ದ ಅವರು ಕಳೆದ ಐದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ರು. ಕೊನೆಗಾಲದವರೆಗೂ ಅವರು ಕಲೆಯ ಏಳ್ಗೆ ಕುರಿತು ಚಿಂತಿಸುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದರು.

 

ಬೈಟ್: ಬಿ.ಶ್ರೀರಾಮುಲು, ಸಂಸದರು, ಬಳ್ಳಾರಿ.