ಇಂಜಿನಿಯರ್ ವಿದ್ಯಾರ್ಥಿನಿ ಸಾವಿನ ತನಿಖೆಯಾಗಲಿ.

255

ಬಳ್ಳಾರಿ/ಹೊಸಪೇಟೆ:ನಗರದ ಇಂಜಿಯರ್ ಕಾಲೇಜ್ ವಿದ್ಯಾರ್ಥಿನಿ ಪವಿತ್ರ ಹೊಸಮನಿ ಸಾವಿನ ತನಿಖೆ ಕೈಗೊಂಡು, ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ, ಎಸ್ಎಫ್ಐ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ತಹಶೀಲ್ದಾರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ತಹಶೀಲ್ದಾರ ಕಚೇರಿ ಆವರಣದಲ್ಲಿ ಜಮಾವಣೆಗೊಂಡು, ಪವಿತ್ರ ಸಾವು ಶೈಕ್ಷಣಿಕ ಹತ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪಿಡಿಐಟಿ ಕಾಲೇಜ್ನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದ ಪವಿತ್ರ ಪರೀಕ್ಷೆಯಲ್ಲಿ ಅನುತೀರ್ಣಳಾಗಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಅವಕಾಶ ಸಿಗುವುದಿಲ್ಲ ಎಂದ ಆತಂಕಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಪ್ರತಕರಣದ ತನಿಖೆ ನಡೆಸಬೇಕು. ಇಂದಿನ ಶಿಕ್ಷಣದ ನೀತಿ ಪರಿಣಾಮವಾಗಿ ಒತ್ತಡಕ್ಕೆ ಒಳಗಾದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ ಎಂದು ಆರೋಪಿಸಿದರು.
ಶಿಕ್ಷಣ ಕಲಿಕೆಯಲ್ಲಿ ಸರ್ಕಾರ ಸಡಿಲಿಕೆ ನೀಡದಿರುವುದು. ಕಾಲೇಜ್ಗಳಲ್ಲಿ ಅಗತ್ಯ ಮೂಲ ಸೌಲಭ್ಯ ಹಾಗೂ ಖಾಯಂ ಉಪನ್ಯಾಸಕ ನೇಮಕ ಕೊರತೆ ಪರಿಣಾಮವಾಗಿ ಇತಂಹ ಪ್ರಕರಣಗಳು ಪದೇ,ಪದೇ ಘಟಿಸುತ್ತಿವೆ. ಸರ್ಕಾರ ಎಚ್ಚತ್ತುಕೊಂಡು ಬಿಇ ಮತ್ತು ಇತರೆ ಕೋರ್ಸ್ಗಳ ನಿಯಮಗಳನ್ನು ಬದಲಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ಬಿಇ ಮತ್ತು ಇತರೆ ಕೋರ್ಸ್ಗಳ ಕ್ಯಾರಿವೋವರ್ ಪದ್ಧತಿಯನ್ನು ಕೈಬಿಡಬೇಕು. ಖಾಯಂ ಉಪನ್ಯಾಸಕರ ನೇಮಕ ಹಾಗೂ ಅಗತ್ಯ ಮೂಲಸೌಕರ್ಯಬಗಳನ್ನು ಒದಗಿಸಲು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್ಎಫ್ಐ ಮುಖಂಡರಾದ ಅಮರೇಶ ಕಡಗದ, ಬಸವರಾಜ, ಭೀಮನಗೌಡ, ಬಾಲಕೃಷ್ಣ, ಶರಣು, ಶರಭಯ್ಯ, ನಂದೀಶ ಇತರರಿದ್ದರು.