ಡೆಮು(ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್) ರೈಲು ಸೇವೆಗೆ ಚಾಲನೆ

320

ಬೆಂಗಳೂರು/ಕೃಷ್ಣರಾಜಪುರ: ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಡೆಮು, ಮೆಮು ಮತ್ತು ಸಬ್ಅರ್ಬನ್ ರೈಲ್ವೆಗಳ ಸೇವೆಯು ಅಗತ್ಯವಿದೆ ಎಂದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅಭಿಪ್ರಾಯಪಟ್ಟರು. ಬೈಯ್ಯಪ್ಪನಹಳ್ಳಿ ಮತ್ತು ವೈಟ್ಫೀಲ್ಡ್ ನಡುವಿನ ಹೊಸ ಡೆಮು(ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್) ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಒಗ್ಗೂಡಿದರೆ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ, ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಡೆಮು, ಮೆಮು ಮತ್ತು ಸಬ್ಅರ್ಬನ್ ರೈಲ್ವೆಗಳ ಸೇವೆಯು ಅಗತ್ಯವಿದೆ ಇದಕ್ಕೆ ತಗಲುವ ವೆಚ್ಚದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸಲಾಗುವುದು ರಾಜ್ಯ ಸಕರ್ಾರವೂ ಸಹ ಡೆಮು ಮತ್ತು ಮೆಮು ರೈಲ್ವೆ ಸೇವೆಗೆ ಸಹಕರಿಸಿ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು, ರಾಜ್ಯ ಸರ್ಕಾರ ಬಿನ್ನಿ ಮೀಲ್ ಸಮೀಪ 9 ಎಕರೆ ಮತ್ತು ಎನ್ಜಿಎಫ್ ಬಳಿ 40 ಎಕರೆ ಸ್ಥಳ ನೀಡಿದರೆ ಸಬ್ಅರ್ಬನ್ ರೈಲುಗಳ ಸರ್ವೀಸ್ ಸೆಂಟರ್ ಘಟಕ ತೆರೆದು ಉದ್ಯೋಗ ಸೃಷ್ಟಿಸಲಾಗುವುದು, ಬೆಂಗಳೂರಿನಲ್ಲಿ 65 ಲಕ್ಷ ವಾಹನಗಳಿವೆ 40ರಷ್ಟು ವಾಹನ ರಸ್ತೆಯಿಂದ ಹೊರಗುಳಿಸಲು ಸಬ್ಅರ್ಬನ್ ಮತ್ತು ಡೆಮು ರೈಲ್ವೆ ಸೇವೆಯ ಅಗತ್ಯವಿದೆ, ರಾಜ್ಯಕ್ಕೆ ಮುಂಬೈ ಮಾದರಿಯ ಲೋಕಲ್ ಟ್ರೈನ್ ಅವಶ್ಯವಿದೆ, ರೈಲ್ವೆ ಅಭಿವೃದ್ಧಿಗೆ ಈ ಬಾರಿ 3187ಕೋಟಿ ಹಣ ಮೀಸಲಿಡಲಾಗಿದೆ, ಸಬ್ ಅರ್ಬನ್ ರೈಲ್ವೆ ನಿರ್ವಹಣೆಗೆ ಬೇಕಾದ ವ್ಯವಸ್ಥೆಯನ್ನು ಬೆಂಗಳೂರಿನಲ್ಲೇ ಘಟಕ ಸ್ಥಾಪಿಸಬೇಕು. ಹೊಸೂರು ಬೈಯ್ಯಪ್ಪನಹಳ್ಳಿ 54ಕಿ.ಮೀ ಮಾರ್ಗ ಮತ್ತು, ಯಶವಂತಪುರ, ಬೈಯ್ಯಪ್ಪನಹಳ್ಳಿ, ಚನ್ನಸಂದ್ರ 24.ಕಿ.ಮೀ. ವಿಸ್ತಾರದ ಮಾರ್ಗಗಳ ಡಬ್ಲಿಂಗ್ ಮತ್ತು ಎಲೆಕ್ಟ್ರಿಫಿಕೇಷನ್ ಮಾಡಬೇಕಿದೆ ಎಂದರು. ಇದೆ ವೇಳೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ರಾಜ್ಯದ ಬಗ್ಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಸೂಕ್ತವಾಗಿ ಸ್ಪಂಧಿಸುತ್ತಿದ್ದಾರೆ ಅವರಿಗೆ ಅಭಿನಂದನೆಗಳು. ಕೇಂದ್ರ ಸರ್ಕಾರದಿಂದ ರಾಜ್ಯದ ಯೋಜನೆಗಳಿಗೆ ಕೇವಲ ಶೇಕಡ 20 ರಷ್ಟು ಅನುದಾನ ಮಾತ್ರವೇ ನೀಡಲಾಗುತ್ತಿದೆ, ಉಳಿದ ಹಣವನ್ನು ರಾಜ್ಯ ಸಕರ್ಾರ ಭರಿಸಬೇಕಾಗಿದೆ, ಜೊತೆಗೆ ನಗರದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು ಭೂ ಸ್ವಾದೀನ ಪ್ರಕ್ರಿಯೆಗೂ ರಾಜ್ಯ ಸರ್ಕಾರವೇ ಹೊಣೆ ಯಾಗಿದ್ದು, ಇದು ರಾಜ್ಯ ಸಕರ್ಾರಕ್ಕೆ ಹೊರೆಯಾಗಿದೆ, ಸುಮಾರು 10,000ಕೋಟಿ ವೆಚ್ಚ ತಗಲಲಿದೆ ಈಗಾಗಲೇ ಬಜೆಟ್ನಲ್ಲಿ ಸಬ್ ಅರ್ಬನ್ ರೈಲು ಸೇವೆಗೆ 350ಕೋಟಿ ಹಣವನ್ನು ಮೀಸಲಿಡಲಾಗಿದೆ, ದೇಶದ ಇತರೆ ನಗರಗಳಾದ ಮುಂಬೈ, ಚೆನ್ನೈಗಳ ಮಾದರಿಯಲ್ಲಿ ರೈಲ್ವೆ ಇಲಾಖೆಯೇ ಉಸ್ತುವರಿ ವಹಿಸಿ ಸಬ್ಅರ್ಬನ್ ರೈಲು ಯೋಜನೆಯನ್ನು ಮಾಡಿಕೊಡುವಂತೆ ಕೋರಿದ್ದಾರೆ. ನಾವು ಮೆಟ್ರೋ ಕಾಮಗಾರಿಯನ್ನು ಅತಿ ವೇಗವಾಗಿ ಮಾಡುತ್ತಿದ್ದೇವೆ, ಸಬ್ ಅರ್ಬನ್ ರೈಲ್ವೆ ಮೇಲೆ ನಾವು ಅವಲಂಬಿತರಾಗಿಲ್ಲ ಎಂದರು. ಇತ್ತೀಚೆಗೆ ಸುರಿದ ಭಾರೀ ಮಳೆ 125 ವರ್ಷಗಳಲ್ಲಿ ಇದು ದಾಖಲೆ ಮಳೆಯಾಗಿದೆ, ಬಿಹಾರ ಪಟ್ನ ದೆಹಲಿಗಳಂತಹ ಮಹಾನಗರಗಳಿಗೆ ಹೋಲಿಸಿದರೆ ನಮ್ಮ ಬೆಂಗಳೂರು ಸೇಪ್ ಎಂದರು, ಕೇವಲ 250ರಿಂದ 300 ಮನೆಗಳಿಗೆ ಮಾತ್ರವೇ ನೀರು ನುಗ್ಗಿದೆ ಅಷ್ಟು ದೊಡ್ಡ ಅನಾಹುತವೇನು ಸಂಭವಿಸಿಲ್ಲ ಎಂದರು. ಶನಿವಾರವೂ ಸಹ ಬೆಳಿಗ್ಗೆ 6,30ಯಿಂದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದೆಂದು ತಿಳಿಸಿದರು. ಇದೆ ವೇಳೆ ಮಾತನಾಡಿದ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಕರ್ನಾಟಕಕ್ಕೆ ಮೆಟ್ರೋಗಿಂತ ಸಬ್ಅರ್ಬನ್ ರೈಲು ಅತ್ಯಗತ್ಯ ಮೆಟ್ರೋ ರೈಲಿನಲ್ಲಿ ಕೇವಲ ನಗರ ವಾಸಿಗಳು ಮಾತ್ರ ಸಂಚರಿಸಲು ಸಾಧ್ಯ ಸಬ್ಅರ್ಬನ್ ರೈಲಿನಲ್ಲಿ ಗ್ರಾಮೀಣ ಜನರೂ ಸಹ ಸಂಚರಿಸಬಹುದಾಗಿದೆ ಹಾಗಾಗಿ ರಾಜ್ಯ ಸಕರ್ಾರ ಸಬ್ಅರ್ಬನ್ ರೈಲಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯಿಸಿದರು. ಸಬ್ ಅರ್ಬನ್ ರೈಲಿಗೆ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಹಲವಾರು ಸಮಸ್ಯೆಗಳು ಎದ್ದು ಕಾಣುತ್ತಿವೆ, ಅದರ ಬಗ್ಗೆಯೂ ಗಮನಹರಿಸಬೇಕೆಂದರು. ಈ ರೈಲು ಸೇವೆಯಿಂದ ವೈಟ್ಫೀಲ್ಡ್ ಹೂಡಿ, ಬಂಗಾರಪೇಟೆ ಮಾಲೂರು ಸೇರಿದಂತೆ ವಿವಿಧೆಡೆಯಿಂದ ನಗರಕ್ಕಾಗಮಿಸುವ ಹಾಗು ನಗರದಿಂದ ಹೊರ ಹೋಗುವವರಿಗೆ ಅನುಕೂಲವಾಗಲಿದೆ, ವೈಟ್ಫೀಲ್ಡ್ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಐಟಿಬಿಟಿ ಸಂಸ್ಥೆಗಳಿದ್ದು ದಿನನಿತ್ಯ ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗೆ ಹತ್ತು ಸಾವಿರಕ್ಕೂ ಅಧಿಕ ಜನ ಸಂಚರಿಸುವ ಮೂಲಕ ಅನುಕೂಲ ಪಡೆಯಲಿದ್ದಾರೆ. 12ಕಿ.ಮೀ. ಅತಿ ಹೆಚ್ಚು ಸಂಚಾರ ದಟ್ಟಣೆಯಿರುವಂತಹ ಐಟಿಪಿಎಲ್ನ 12.ಕಿ.ಮೀ ಹಂತವನ್ನು ಕೇವಲ 25ನಿಮಿಷಗಳಲ್ಲಿ ಕ್ರಮಿಸುವ ಈ ಡೆಮು ರೈಲಿನಲ್ಲಿ 8ಬೋಗಿಗಳಿದ್ದು, 804 ಆಸನಗಳಿವೆ, ಏಕಕಾಲಕ್ಕೆ 2412 ಪ್ರಯಾಣಿಕರನ್ನು ಕರೆದೊಯ್ಯುವ ಸಾಮಥ್ರ್ಯವನ್ನು ಹೊಂದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪೀಕ್ ಅವರ್ನಲ್ಲಿ ಐಟಿಪಿಎಲ್ ಭಾಗಕ್ಕೆ ನಗರದಿಂದ ಬರುವ ಮತ್ತು ತೆರಳುವ ಜನರಿಗೆ ಸಬ್ ಅರ್ಬನ್ ರೈಲು ಅನುಕೂಲವಾಗಲಿದ್ದು, ಬೈಯ್ಯಪ್ಪನಹಳ್ಳಿಯ ಮೆಟ್ರೋ ಸಂಚಾರ ವ್ಯವಸ್ಥೆ ಬಳಸಿದರೆ ಸಂಚರ ಸುಗಮವಾಗಲಿದೆ. ಈ ಸಂದರ್ಭದಲ್ಲಿ ಮೇಯರ್ ಜಿ.ಪದ್ಮಾವತಿ, ರಾಜ್ಯ ಸಭಾ ಸದಸ್ಯ ಎಂ.ವಿ.ರಾಜೀವ್ ಚಂದ್ರಶೇಖರ್, ಶಾಸಕರಾದ ಬಿ.ಎ.ಬಸವರಾಜ, ಎಸ್.ರಘು, ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣ ಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

ಡೆಮು ರೈಲು ಸಂಚರಿಸುವ ವೇಳಾಪಟ್ಟಿ ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ ಕಡೆಗೆ ಬೆಳಗ್ಗೆ 8.25ಕ್ಕೆ ಬೈಯ್ಯಪ್ಪನಹಳ್ಳಿ, 8.30ಕ್ಕೆ ಕೆಆರ್ಪುರ. 8.36ರಕ್ಕೆ ಹೂಡಿ, 8.50ಕ್ಕೆ ವೈಟ್ಫೀಲ್ಡ್, ವೈಟ್ಫೀಲ್ಡ್ನಿಂದ ಬೈಯ್ಯಪ್ಪನಹಳ್ಳಿ ಕಡೆಗೆ ಸಂಜೆ 6.15ಕ್ಕೆ ವೈಟ್ಫೀಲ್ಡ್, 6.21ಕ್ಕೆ ಹೂಡಿ, 6.29ಕ್ಕೆ ಕೆಆರ್ಪುರ, 6.45ಕ್ಕೆ ಬೈಯ್ಯಪ್ಪನಹಳ್ಳಿ,
ಇದೇ ವೇಳೆ ಮೇಕ್ ಇನ್ ಇಂಡಿಯಾ ಯೋಜನೆಯಡಿ 19 ರೈಲ್ವೆ ಯೋಜನೆಗಳಿಗೆ ನವದೆಹಲಿಯ ರೈಲ್ವೆ ಭವನದಿಂದ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದಾರೆ. ರಾಯ್ಭಾಗ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಿ ಬೈಪಾಸ್ ಯೋಜನೆಗೆ ಶಂಕು ಸ್ಥಾಪನೆ, ಗದಗ ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ನಿರ್ಮಾಣ, ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಹೊಸ ಫ್ಲಾಟ್ ಫಾರ್ಮ್, ನಿಲ್ದಾಣ, ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಿಐಪಿ ಲಾಂಜ್ ನಿರ್ಮಾಣ, ಮೈಸೂರು ವರ್ಕ್ ಷಾಪಿಲ್ಲಿ ಸೌರ ಶಕ್ತಿ ಅಳವಡಿಕೆ, ಮೈಸೂರು ರೈಲ್ವೆ ನಿಲ್ದಾಣದಲ್ಲಿ ನೀರು ಸಂಸ್ಕರಣಾ ಕೇಂದ್ರ ಸ್ಥಾಪನೆ, ಹೊಳನರಸೀಪುರದ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ನಿಮರ್ಾಣ, ಮಂಗಳೂರು ರೈಲ್ವೆ ನಿಲ್ದಾಣ ಅಭಿವೃದ್ಧಿ, ಯಾದಗಿರಿಯಲ್ಲಿ ಬೋಗಿ ಕಾರ್ಖಾನೆ, ತಿನೈಘಾಟ್ ವಾಸ್ಕೋ ಲೈನ್ ಡಬ್ಲಿಂಗ್, ಇಂಡಿ ತಿನೈಘಾಟ್ ಮಾರ್ಗದ ವಿದ್ಯುದೀಕರಣ, ಗದಗ ಮತ್ತು ವಾಡಿ ನಡುವೆ ಹೊಸ ಮಾರ್ಗ, ಹೊತಗಿ-ಕೊಡಗಿ-ಗದಗ ಮಾರ್ಗ ಡಬ್ಲಿಂಗ್, ಬಾನಪುರ ಮತ್ತು ಹೊಸಪೇಟೆ ವಾಸ್ಕೋ ಡಬ್ಲಿಂಗ್ ಮಾರ್ಗ, ಚಿಕ್ಕೋಡಿ ರೈಲ್ವೆ ನಿಲ್ದಾಣದ ಹೊಸ ಫ್ಲಾಟ್ ಫಾರ್ಮ್ ನಿರ್ಮಾಣ, ನೇತ್ರಾವತಿ ಮಂಗಳೂರು ಸೆಂಟ್ರಲ್ಗೆ ಅಡಿಗಲ್ಲು, ಬೈಯ್ಯಪ್ಪನಹಳ್ಳಿ ಮತ್ತು ವೈಟ್ಫೀಲ್ಡ್ ನಡುವೆ ಡೆಮೂ ರೈಲ್ವೆ ಸೇವೆಗಳಿಗೆ ಹಸಿರು ನಿಶಾನೆ ನೀಡಿದ್ದಾರೆ.