ಸಾರ್ವಜನಿಕ ಶಾಂತಿ ಸಭೆ..

246

ಬಳ್ಳಾರಿ /ಹೊಸಪೇಟೆ ಮರಿಯಮ್ಮನಹಳ್ಳಿ : ಹಬ್ಬ – ಉತ್ಸವಗಳ ನೆಪದಲ್ಲಿ ಸಾರ್ವಜನಿಕ ಜೀವನ ಕ್ಕೆ ಧಕ್ಕೆ ತರುವ ಚಟುವಟಿಕೆಗಳನ್ನು ಮಾಡಬಾರದು ಎಂದು ಪಟ್ಟಣದ ಪಿ . ಎಸ್ . ಐ .ವಿಜಯಕುಮಾರ್ ಹೇಳಿದರು . ಅವರು ಶುಕ್ರವಾರ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಗಣೇಶ ಹಬ್ಬದ ನಿಮಿತ್ತ ನಡೆಸಿದ ಸಾರ್ವಜನಿಕ ಶಾಂತಿ ಸಭೆಯ ಅಧ್ಯಕ್ಷ ತೆ ವಹಿಸಿಕೊಂಡು ಮಾತನಾಡುತ್ತಾ , ಗಣೇಶ ಹಬ್ಬದ ನಿಮಿತ್ತ ಇಲಾಖೆಯು ಕೆಲವು ನಿಯಮಗಳನ್ನು ರೂಪಿಸಿದೆ , ಗಣೇಶ ನನ್ನು ಪ್ರತಿಷ್ಟಾಪಿಸುವ ಸಂಘ – ಸಂಸ್ಥೆಗಳು ಅವುಗಳನ್ನು ಪಾಲಿಸಿ ಇಲಾಖೆ ಗೆ ಸಹಕಾರ ನೀಡಿ ಸಮಾಜದಲ್ಲಿ ಶಾಂತಿ ಕದಡದಂತೆ , ಮುಂಜಾಗೃತೆಗೆ ಮುಂದಾಗಬೇಕು . ಅಲ್ಲದೆ ಗಣೇಶ ನ ಪ್ರತಿ ಷ್ಟಾಪನೆ ಮತ್ತು ವಿಸರ್ಜನೆ ವೇಳೆ ಮೆರವಣಿಗೆ ನಡೆಸುವಾಗ ಅಸಭ್ಯ ವಾಗಿ ವರ್ತಿಸುವವರ ಮೇಲೆ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು . ಪ.ಪಂ. ಸದಸ್ಯ ನವೀನ ಕುಮಾರ್ ಮಾತನಾಡಿ , ಗಣೇಶ ಹಬ್ಬವನ್ನು ಸ್ವಾಮ್ಯದ ದ ಪೂರ್ವದಲ್ಲಿ , ಸ್ವಾತಂತ್ರ್ಯ ಹೋರಾಟಕ್ಕಾಗಿ , ಸಂಘಟಿಸಲು ಬಳಸಿಕೊಳ್ಳಲಾಗಿತ್ತು , ಆದ್ದರಿಂದ ಈ ಹಬ್ಬ ಕ್ಕೆ ಒಂದು ಒಳ್ಳೆಯ ಇತಿಹಾಸ ಮತ್ತು ಧಾರ್ಮಿಕ ಹಿನ್ನೆಲೆ ಇದೆ ಅಂತಹ ಹಿನ್ನೆಲೆ ಇರುವ ನಮ್ಮ ಹಬ್ಬಗಳನ್ನು ಸೌರ್ಹದತೆಯಿಂದ ಆಚರಿಸುವ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಲು ಕರೆನೀಡಿದರು . ಸಂಧರ್ಭದಲ್ಲಿ ಪ.ಪಂ.ಉಪಾಧ್ಯಕ್ಷ ಬಂಗಾರಿ ಮಂಜುನಾಥ ಮಾತನಾಡಿದರು . ಪ.ಪಂ. ಸ್ಥಾಯಿಸಮಿತಿ ಅದ್ಯಕ್ಷ ಅಕಾರಿಮಹೇಶ , ಪ.ಪಂ.ಸದಸ್ಯರಾದ ವಿಷ್ಣುನಾಯ್ಕ , ನಗಾರಿ ಬುಡೇನ್ ಸಾಬ್ , ನರಸಿಂಹ ಮೂರ್ತಿ , ಮುತ್ತಾವಲಿ ಇಮಾಮ್ ಸಾಬ್ , ತಳವಾರ ಹುಲುಗಪ್ಪ , ಎಲ್ . ನಾಗರಾಜ , ಗುಂಡಾಸ್ವಾಮಿ , ಈಡಿಗರ ರಮೇಶ , ಎ . ಸುಭಾನ್ , ಆನಂದ , ಭರತ್ ಕುಮಾರ್ ,

ಮರಡಿರಾಮಣ್ಣ , ಐನಳ್ಳಿ ಮಂಜುನಾಥ , ಎ.ಎಸ್.ಐ.ನಿರಂಜನಗೌಡ , ಪೇದೆಗಳಾದ ಕೊಟ್ರೇಶ , ಸಿದ್ದೇಶ , ಬಸವನಗೌಡ , ದೇವೆಂದ್ರಪ್ಪ , ಇತರರಿದ್ದರು.