ಶ್ರೀಕೃಷ್ಣಜನ್ಮಾಷ್ಠಮಿ ಅದ್ದೂರಿ ಜಯಂತೋತ್ಸವ.

502

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಬೆಂಗಳೂರು ವೃತ್ತದ ಬಳಿ ಇರುವ ಗುರು ಭವನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಾಲ್ಲೂಕು ಯಾಧವ ಸಮುದಾಯದ ಸಹಯೋಗದೊಂದಿಗೆವ ಹಮ್ಮಿಕೊಂಡಿದ್ದ 4 ನೇ ಶ್ರೀ ಕೃಷ್ಣಾ ಜನ್ಮಾಷ್ಟಮಿ ಜಯಂತೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಒಂದು ಜೀವಿ ಬದುಕ ಬೇಕಾದರೆ ಆಜೀವಿಗೆ ಜಗ್ಗತಿನ ಶೃಷ್ಟಿಯಲ್ಲಿರುವ ಪಂಚಭೂತಗಳು ಆತಿ ಮುಖ್ಯ ಆದರೆ ಈ ಪಂಚಭೂತಗಳಿಂದ ಮೊದಲು ಹುಟ್ಟಿದ ಯುಗ ಪುರುಷ ಶ್ರೀ ಕೃಷ್ಣಾ ಭಗವಾನ್ ರು ಎಂದು ಕ್ಷೇತ್ರದ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ತಿಳಿಸಿದರು.

ಸಮಸ್ತ ಯಾದವ ಸಮುದಾಯದವರು ಒಗ್ಗಟಾಗಿ ಎಲ್ಲಾ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಾವುದೇ ರೀತಿಯ ಅಡಚನೆಗಳಿಗೆ ಒಳಗಸಗದೆ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಯಾಧವನಂದ ಸ್ವಾಮಿ ಗಳು ಅಭಿಪ್ರಾಯ ಪಟ್ಟರು.

 

ಬೃಹತ್ ಮೆರವಣಿಗೆ :- ನಗರದ ಪ್ರವಾಸ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ದಂಡಾಧಿಕಾರಿ ಗಂಗಪ್ಪ, ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ,ತಾಪಂ ಅಧ್ಯಕ್ಷ ಶಾಂತಮ್ಮವರಧರಾಜು, ನಗರಸಭೆ ಅಧ್ಯಕ್ಷ ಸುಜಾತ ಶಿವಣ್ಣ, ತಾಪಂ ಉಪಾಧ್ಯಕ್ಷ ಶ್ರೀ ನಿವಾಸ ,ನಗರಸಭೆ ಪೌರಾಯುಕ್ತ ಮುನಿಸ್ವಾಮಿ,ನಗರಸಭೆ ಸದಸ್ಯರಾದ ಷಫೀಕ್,ಅಬ್ಬುಗುಂಡು ಶ್ರೀ ನಿವಾಸ ,ಹಾಗೂ ಮುಂತಾದ ಗಣ್ಯರ ನೇತೃತ್ವದಲ್ಲಿ ಸುಮಾರು 20 ಕ್ಕೂ ಹೆಚ್ಚು ಸ್ತಭ್ದ ಚಿತ್ರಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾನಪದ ನೃತ್ಯಗಳಾದ ಡೋಳು ,ಕುಣಿತ ವೀರಗಾಸೆ, ತಮಟೆವಾಧ್ಯೆ,ಗಾರಡಿ ಗೊಂಬೆಗಳು ಹಾಗೂ ಇನ್ನಿತರ ಜಬೆಂಗಳೂರುಪದ ಕಲಾತಂಡಗಳೋಂದಿಗೆ ನಗರದ ಬೆಂಗಳೂರು ವೃತ್ತ, ಗಜಾನನ ವೃತ್ತ, ಚೇಳೂರು ವೃತ್ತ ,ಮಾರ್ಗವಾಗಿ ಭವ್ಯ ಮೆರವಣಿಗೆ ನಡೆಸಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ವೇಳೆ ಯಾವುದೇ ಅಹಿತರ ಘಟಕಗಳು ನಡೆಯದಂತೆ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಬಿಗಿಬಂದೋಬಸ್ ಮಾಡಲಾಗಿತ್ತು.