ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ

256

ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯಿಂದ ಅಸಮರ್ಪಕ ಪರೀಕ್ಷಾ ಪದ್ಧತಿ-ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಒತ್ತಡ-ಎಐಡಿಎಸ್ ಓ ನೇತೃತ್ವದಲ್ಲಿ ಪ್ರತಿಭಟನೆ

ಬಳ್ಳಾರಿ /ಬಳ್ಳಾರಿ : ಕಳೆದ ಐದು ವರ್ಷಗಳಿಂದ ವಿ.ಟಿ.ಯು. ವಿದ್ಯಾರ್ಥಿಗಳ ಮಾನಸಿಕ ಹಾಗೂ ಬೌದ್ಧಿಕ ಕಸರತ್ತಿಗೆ ಅವಕಾಶ ನೀಡುವ ಬದಲು ಅವರನ್ನು ಮಾನಸಿಕವಾಗಿ ಬಳಲುವಂತೆ ಮಾಡುತ್ತಿದೆ ಎಂದು ಆರೋಪಿಸಿ ಇಂದು ಎಐಡಿಎಸ್ ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಳ್ಳಾರಿಯ ವಿವಿಧ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಕಾಲೇಜು ತರಗತಿಗಳನ್ನು ಬಹಿಷ್ಕರಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ರು.

ಎಐಡಿಎಸ್ ಓ ರಾಜ್ಯಾಧ್ಯಕ್ಷ ಡಾ.ಪ್ರಮೋದ್ ನೇತೃತ್ವದಲ್ಲಿ ಸಾವಿರಾರು ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಗಾಂಧಿಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿ ವಿ.ಟಿ.ಯು.ಪರೀಕ್ಷಾ ಪದ್ಧತಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಕ್ರಾಷ್ ಕೋರ್ಸ್ ಸಿಲೆಬಸ್ ನ ಪರೀಕ್ಷೆಗಳು ಫೆಬ್ರವರಿ ತಿಂಗಳಲ್ಲಿ ನಡೆಸಬೇಕಿತ್ತು. ಆದ್ರೆ, ಮೇ ತಿಂಗಳಲ್ಲಿ ನಡೆಸಿರುವುದರಿಂದ ವಾರ್ಷಿಕ‌ಪರೀಕ್ಷೆಗಳ ಜೊತೆ ಕ್ರಾಷ್ ಕೋರ್ಸ್ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ಸಾಕಷ್ಟು ಒತ್ತಡವನ್ನು ಎದುರಿಸಬೇಕಾಯಿತು ಅಂತ ವಿದ್ಯಾರ್ಥಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆದ ಅವ್ಯವಸ್ಥೆ ಮುಂದಿನ ವರ್ಷದಿಂದ ಆಗದಿರುವಂತೆ ಎಚ್ಚರಿಕೆ ವಹಿಸಬೇಕೆಂದು ಡಿಸಿ‌ ಮೂಲಕ ಸಿಎಂ ಸಿದ್ಧರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ರು.

ಈವೇಳೆ ವಿಟಿಯು ಇಂಜಿನಿಯರಿಂಗ್ ವಿದ್ಯಾರ್ಥಿ ಹೋರಾಟ ಸಮಿತಿ ಸಂಚಾಲಕ ವಿ.ಜಗಧೀಶ್, ಪದಾಧಿಕಾರಿಗಳಾದ ಮಹೇಶ್ ಹೆಚ್.ಎಂ. ಸೂರ್ಯಪ್ರಕಾಶ್,ಲೆನಿನ್, ರೇಖಾ, ಲಕ್ಷ್ಮೀಕಾಂತ್ ಮತ್ತು ಶಿವಲಿಂಗಪ್ಪ ಇದ್ರು.