ಪಿಂಚಣಿ ಹಣ ಪಡೆಯೋಕೂ.. ನೀಡಬೇಕು ಲಂಚ !?

454

ಬಳ್ಳಾರಿ /ಬಳ್ಳಾರಿ: ಗಣಿನಾಡಿನಲ್ಲಿ ಸರಕಾರಿ ಇಲಾಖೆಯಲ್ಲಿನ ಅಧಿಕಾರಿಗಳು ಲಂಚ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾನೆ ಇವೆ. ಮೊನ್ನೆಯಷ್ಟೆ ಪೊಲೀಸ್ ಪೇದೆಗಳಿಬ್ಬರು ಲಂಚ ಪಡೆದ ವಿಡಿಯೋ ಬಹಿರಂಗವಾದ ಬೆನ್ನಲ್ಲೆ ಮತ್ತೊಬ್ಬ ಲಂಚಬಾಕ ಅಧಿಕಾರಿಯ ಬಣ್ಣ ಸಾಮಾಜಿಕ ಜಾಲತಾಣದಲ್ಲಿ ಬಯಲಾಗಿದೆ,
ಬಳ್ಳಾರಿ ಜಿಲ್ಲೆಯ ಸಂಡೂರಿನ ಪುರಸಭೆಯ ಅಕೌಂಟೆಂಟ್ ಪ್ರಭುಗೌಡ ಎಂಬ ಅಧಿಕಾರಿ, ನಿವೃತ್ತಿ ಹೊಂದಿದ ಸಿಬ್ಬಂದಿಯೊಬ್ಬರ ನಿವೃತ್ತಿ ನಂತರದ ಹಣ ನೀಡಲು ಮತ್ತು ಪೆನ್ಷನ್ ಮಾಡಿ ಕೊಡಲು ೨೦ ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಕೆಲಸ ಮಾಡಿಕೊಡಲು ಮುಂಗಡವಾಗಿ ೧೦ ಸಾವಿರ ಹಣ ಲಂಚ ಪಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಕೌಂಟೆಂಟ್ ಪ್ರಭುಗೌಡ ಪ್ರತಿಯೊಂದಕ್ಕೂ ಸಹಾ ಹಣ ಪಡೆಯದೇ, ಯಾವ ಕೆಲಸ ಕೂಡಾ ಮಾಡೋಲ್ಲ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಲಂಚಾವತಾರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಹೆಚ್ಚಾಗುತ್ತಿದ್ದರೂ ಬಳ್ಳಾರಿ ಜಿಲ್ಲಾಡಳಿತ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ,