ಸಮಾಧಿ ಸಂಶಯಕ್ಕೆ ತೆರೆ..!?

216

ತುಮಕೂರು: ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಾಣವಾದ ಸಮಾಧಿ ಶಂಸಯಕ್ಕೆ ತೆರೆ ಬಿದ್ದಿದೆ. ಸಮಾಧಿ ಅಗೆದ ಪೊಲೀಸರು ಸಾರ್ವಜನಿಕರ ಆತಂಕ ಹಾಗೂ ಸಂಶಯಕ್ಕೆ ತೆರೆ ಎಳೆದಿದ್ದಾರೆ. ಕಾಲೇಜು ಮೈದಾನದಲ್ಲಿ ರಾತ್ರೊರಾತ್ರಿ ಸಮಾಧಿ ನಿರ್ಮಾಣ ಮಾಡಲಾಗಿತ್ತು. ಈ ಸಮಾಧಿ ಆರ್ ಟಿ ಐ ಕಾರ್ಯಕರ್ತನ ಕೊಲೆ ಮಾಡಿ ಹೂಳಲಾಗಿದೆ ಎನ್ನುವ ವದಂತಿ ಹುಟ್ಟಿಕೊಂಡಿತ್ತು. ಆರ್ ಟಿ ಐ ಕಾರ್ಯಕರ್ತರ ಕೆಲದಿನಗಳಿಂದ ನಾಪತ್ತೆ ಯಾಗಿರುವುದು ಇದಕ್ಕೆ ಇನ್ನಷ್ಟು ಪುಷ್ಠಿ ಕೊಟ್ಟಿತ್ತು. ಹಾಗಾಗಿ ಪೊಲೀಸರು ಶೀಘ್ರವಾಗಿ ಬಂದು ಸಮಾಧಿ ಅಗೆದಿದ್ದಾರೆ.
ಸಮಾಧಿಯಲ್ಲಿ ಏನೂ ಪತ್ತೆಯಾಗಿಲ್ಲ. ಖಾಲಿ ಜಾಗದಲ್ಲಿ ದುಷ್ಕರ್ಮಿಗಳು ಸಮಾಧಿ ನಿರ್ಮಾಣ ಮಾಡಿದ್ದಾರೆ. ಆದರೆ ಯಾವ ಕಾತಣಕ್ಕೆ ಸಮಾಧಿ ನಿರ್ಮಾಣ ಮಾಡಲಾಗಿದೆ ಅನ್ನೋದು ಇನ್ನೂ ನಿಗೂಢವಾಗಿದೆ. ಈ ಸಂಬಂಧ ಇಬ್ಬರನ್ನು ಹೊಸಬಡಾವಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ.