ಚೈಲ್ಡ್ ಡೆವೆಲಪ್ಮೆಂಟ್ ಸೆಂಟರ್ ಉದ್ಘಾಟನೆ

232

ಬೆಂಗಳೂರು/ಮಹದೇವಪುರ:– ಶಿಶುಗಳಲ್ಲಿನ ದೋಷಗಳನ್ನು ಪ್ರಾರಂಭದಲ್ಲಿಯೇ ಕಂಡುಹಿಡಿಯಲು ಮಕ್ಕಳ ಅಭಿವೃದ್ಧಿ ಕೇಂದ್ರಗಳು ಅಗತ್ಯವಿದೆ ಎಂದು ಮಿಸಸ್  ಇಂಡಿಯಾ ತೃಪ್ತಿ ರಾವ್ ಅಭಿಪ್ರಾಯಪಟ್ಟರು.
ಹೊರವರ್ತುಲ ರಸ್ತೆಯ ದೊಡ್ಡನಕುಂದಿ ಸಮೀಪವಿರುವ ರೈನ್ಬೋ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಚೈಲ್ಡ್ ಡೆವೆಲಪ್ಮೆಂಟ್ ಸೆಂಟರ್ ಉದ್ಘಾಟಿಸಿ ನಂತರ ಮಾತನಾಡಿದ ಅವರು,
ಹೈ ರಿಸ್ಕ್ನಲ್ಲಿರುವ ಮಕ್ಕಳನ್ನು ಜನನ ಸಮಯದಿಂದ ಅವರ ಬೆಳವನೀಗೆಯ ಹಂತದವೆರಗೂ ಗಮನಿಸಿ ಅವರಲ್ಲಿನ ಸಾಮಥ್ರ್ಯಗಳನ್ನು ಸಾಧಿಸಲು ಮಕ್ಕಳ ಅಭಿವೃದ್ಧಿ ಕೇಂದ್ರಗಳು ಸಹಕಾರಿಯಾಗಲಿವೆ ಅಲ್ಲದೆ ಮುಖ್ಯವಾಗಿ ಮಕ್ಕಳಲ್ಲಿರುವ ದೋಷಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗರುತಿಸಲು ಈ ಕೇಂದ್ರಗಳು ಪ್ರಮುಖ ಪಾತ್ರವಹಿಸಲಿವೆ ಎಂದು ತಿಳಿಸಿದರು.
ಪುಟ್ಟ ಮಕ್ಕಳಲ್ಲಿ ಬಹುಶೀಸ್ತಿಯಾ ತಜ್ಞರ ತಂಡದ ಮಾರ್ಗ ದರ್ಶನದಲ್ಲಿ ಅವರ ಸಾಮಥ್ರ್ಯವನ್ನು   ಗರಿಷ್ಟ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿಕೊಳ್ಳಲು  ಈ ಕೇಂದ್ರಗಳು ನೆರವಾಗುತ್ತವೆ, ಇದು ತಜ್ಞರ ತಂಡದ ಪ್ರಾರಂಭಿಕ ಹಾಗು ಸಾಕಾಲಿಕ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಆಸ್ಪತ್ರೆಯ ಡೆವೆಲೆಪ್ಮೆಂಟ್ ಮತ್ತು ಬಿಹೇವಿಯರ್ ಪೀಡಿಯಾಟ್ರೀಷಿಯನ್ ಡಾ. ಎಂಜಲಾ ಡೆವಿಡ್ ಮಾತನಾಡಿ ಮಕ್ಕಳ ಮೆದುಳಿನಲ್ಲಿ ಅಧ್ಭುತವಾದ ಸಾಮಥ್ರ್ಯವಿದೆ, ಇದರಿಂದ ಅವರು ಶಾಲೆಯ ವಯಸ್ಸಿನಲ್ಲಿಯೇ ಸಂಪೂರ್ಣ ಸ್ವಾತಂತ್ರ್ಯ ವ್ಯಕ್ತಿಯಾಗಬಹುದು ಈ ಅಭಿವೃದ್ಧಿ ಎಲ್ಲಾ ಮಕ್ಕಳಲ್ಲೂ ಅದರಲ್ಲೂ ಹೈರಿಸ್ಕ್ ಮಕ್ಕಳಲ್ಲೂ ಆಗುತ್ತಿದೆ ಎಂಬುದನ್ನು ದೃಢಪಡಿಸಿಕೊಳ್ಳಲು ಇಂತಹ ಮಕ್ಕಳ ಮೌಲ್ಯಮಾಪನ ಮತ್ತು ಚಿಕಿತ್ಸೆಗೆ ಮಕ್ಕಳ ಅಭಿವೃದ್ಧಿ ಕೇಂದ್ರಗಳು ಅಗತ್ಯವಾಗಿವೆ ಎಂದು ಹೇಳಿದರು.

ಮಗುವಿನ ಮೆದುಳು ನಿಸರ್ಗದಲ್ಲಿ ಅತ್ಯಂತ ಶಕ್ತಿಯುತವಾಗಿರುತ್ತದೆ, ವಯಸ್ಕರ ಮೆದುಳಿಗಿಂತ 2.5ಪಟ್ಟು ಹೆಚ್ಚು ಸಂಪರ್ಕಗಳನ್ನು ಹೊಂದಿರುತ್ತದೆ, ಇದರೊಂದಿಗೆ ನ್ಯೂರೋ ಪ್ಲಾಸ್ಟಿಸಿಟಿ ಅದರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಮಗುವಿನ ಸಾಮಥ್ರ್ಯಗಳು ಮತ್ತು ದೌರ್ಬಲ್ಯಗಳನ್ನು ಪರೀಕ್ಷಿಸಿ ಮಗುವಿಗೆಂದೇ ರೂಪಿಸಿದ ನಿಧರ್ಿಷ್ಟ ಕಾರ್ಯಗಳು ಹಾಗು ಚಟುವಟಿಕೆಗಳನ್ನು ನೀಡ ಬಹುದಾಗಿದೆ. ಇದರಿಂದ ಮಗುವಿನ ಭವಿಷ್ಯ ಉತ್ತಮವಾಗುತ್ತದೆ ಅಲ್ಲದೆ, ಸಮಾಜದ ಉತ್ತಮ ಸದಸ್ಯನಾಗಲು ಮಕ್ಕಳ ಅಭಿವೃದ್ಧಿ ಕೇಂದ್ರ ಅತ್ಯಂತ ಉಪಾಯಕಾರಿ ಎಂದು ತಿಳಿಸಿದರು.
ಮಕ್ಕಳ ಅಭಿವೃದ್ಧಿ ಕೇಂದ್ರ ಭಾರತದಲ್ಲೇ ಪ್ರಥಮವಾಗಿ ಬೆಂಗಳೂರಿನ ರೈನ್ಬೋ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಪ್ರಾರಂಭವಾಗಿದೆ.
ಖ್ಯಾತ ಬೊಂಬೇ ಆಟ ಕಲಾವಿದೆ ರೇಣುಕಾ ಅವರ ಬೊಂಬೆ ಆಟವನ್ನು ಪ್ರದಶರ್ಿಸುವ ಮೂಲಕ ತಮ್ಮ ಮಕ್ಕಳ ಕುರಿತು ಯಾವ ರೀತಿಯಲ್ಲಿ ಹಾರೈಕೆ ಮಾಡಬೇಕೆಂಬ ಸಂದೇಶವನ್ನು ಪಸರಿಸಿದರು.

ಈ ಸಂದರ್ಭದಲ್ಲಿ ಪೀಡಿಯಾಟಿಕ್ ನ್ಯೂರಾಲಜಿಸ್ಟ್ ಡಾ. ಆನ್ನ್ ಆಗ್ನೆಸ್ ಮ್ಯಾಥ್ಯೂ, ಅಣ್ಣಾ, ರೈನ್ಬೋ ಚಿಲ್ಡ್ರನ್ ಆಸ್ಪತ್ರೆಯ ಉಪಾಧ್ಯಕ್ಷ  ಕ್ಲಸ್ಟರ್ ಹೆಡ್ ನೀರಜ್ ಲಾಲ್ ಹಾಗು ಮತ್ತಿತರರಿದ್ದರು.