ಉಚಿತ ಆರೋಗ್ಯ ತಪಾಸಣಾ ಶಿಬಿರ

326

,ಚಿಕ್ಕಬಳ್ಳಾಪುರ / ಶಿಡ್ಲಘಟ್ಟ :ಎಸ್ ಎನ್ ಕ್ರೀಯಾ ಟ್ರಷ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಕುಂದಲಗುರ್ಕಿ ಪ್ರರ್ಥಮಿಕ ಆರೋಗ್ಯ ಕೇಂದ್ರದ ಬಳಿ ಹೊಸಕೋಟೆ ಎಂವಿಜೆ ಆಸ್ಪತ್ರೆ ಸಹಕಾರದಿಂದ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿಸ್ತ ಶಿಬಿರಗಳಿಂದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಕಲ್ಪಿಸಿಕೊಡುವ ಉದ್ದೇಶವಾಗಿದ್ದು, ಬಡ ಜನರು ಆರ್ಥಿಕ ಪರಿಸ್ಥಿತಿಯಲ್ಲಿ ಹಲವಾರು ಸಂಕಷ್ಟಗಳಿಗೆ ಒಳಗಾಗಿರುತ್ತಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ನೀಡಿ ಬಹಳಷ್ಟು ರೋಗಿಗಳು ಚಿಕಿಸ್ತೆ ಮಾಡಿಸಿಕೊಳ್ಳಲು ಆಗದಿರುವಂತ ಘಟನೆಗಳು ಗ್ರಾಮೀಣ ಭಾಗದಲ್ಲಿ ಕಾಣಬಹುದು.ಆದ್ದರಿಂದ ಯಾವುದೇ ವ್ಯೆಕ್ತಿ ಅನಾರೋಗ್ಯಕ್ಕೆ ತುತ್ತಾಗದೆ ಗುಣಮುಖರಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಆಗಲಿ ಎಂಬುದೇ ನಮ್ಮ ಆಶಯ ಎಂದು ಎಸ್ ಎನ್ ಕ್ರೀಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ( ಪುಟ್ಟು) ಹೇಳಿದರು.

ಶಿಬಿರದಲ್ಲಿ ವಯೋ ವೃದ್ಧರಿಗೆ ಸರ್ಕಾರದಿಂದ ಮಾಸಶಾನ ಮಾಡಿಸಿಕೊಡಲು ದಾಖಲೆಗಳನ್ನು ಪಡೆದುಕೊಳ್ಳುವ ಮೂಲಕ ಎಸ್ ಎನ್ ಕ್ರೀಯಾ ಟ್ರಷ್ಟ್ ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ವಯೊ ವೃದ್ಧರ ಹೆಸರುಗಳನ್ನು ನೋಂದಣಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೋಟಹಳ್ಳಿ ಶ್ರೀನಿವಾಸ್, ವಿಶ್ವನಾಥ್, ಬೈರೇಗೌಡ, ಅಶ್ವಥ್ ನಾರಾಯಣ, ನವೀನ್ ಹಾಗೂ ಹಲವಾರು ಸ್ವಯಂ ಕಾರ್ಯಕರ್ತರು ಭಾಗವಿಸಿದ್ದರು