ನಮೋ ಇಷ್ಟ ಪಟ್ಟ ನಮ್ಮ ಹೆಮ್ಮೆಯ ಹಂಪಿ

520

ಬಳ್ಳಾರಿ /ಹೊಸಪೇಟೆ, ಹಂಪಿ :ನವದೆಹಲಿಯಲ್ಲಿ ಇತ್ತೀಚೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು
ಯುವ ಉದ್ಯಮಿಗಳು ಹಾಗೂ ಸಿಇಓ ಗಳ ಸಭೆಯಲ್ಲಿ ಮಾತನಾಡಿ, ನಿಮ್ಮ ಕಂಪನಿಯ ಉದ್ಯೋಗಿಗಳನ್ನು ವಿದೇಶಗಳಿಗೆ ಪ್ರವಾಸಕ್ಕೆ ಕಳುಹಿಸುವ ಬದಲು ಕರ್ನಾಟಕದ ಹಂಪಿಗೆ ಕಳುಹಿಸಿ ಕೊಡಿ ಎಂದು ಸಲಹೆ ನೀಡಿದ್ದಾರೆ.
ವಿಶ್ವ ವಿಖ್ಯಾತ ಹಂಪಿ ಬಗ್ಗೆ ನರೇಂದ್ರ ಮೋದಿ ಅವರು ಹೇಳಿದ ಹೇಳಿಕೆಯಿಂದ ಹಂಪಿಗೆ ಮತ್ತಷ್ಟು ಜೀವ ಬಂದಂತಾಗಿದೆ. ಹಾಳು ಹಂಪೆ ಎಂದು ಜರಿಯುವವರಿಗೆ ಮುಖಭಂಗವಾಗಿದೆ. ಆ ವಿಡಿಯೋ ಇದೀಗ ದೇಶದ್ಯಂತ ವೈರಲ್ ಆಗಿದ್ದು, ಬಳ್ಳಾರಿ ಜಿಲ್ಲೆಯ ಜನತೆ ಮೋದಿ ಅವರ ಹೇಳಿಕೆಯಿಂದ ಹಿರಿ ಹಿರಿ ಹಿಗ್ಗುತ್ತಿದ್ದಾರೆ.