ಕಣ್ಮನ ಸೆಳೆಯುತ್ತಿರುವ-ಹಂಪಿಯ ಸ್ಮಾರಕಗಳು

377

ಬಳ್ಳಾರಿ /ಹೊಸಪೇಟೆ:ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಹಂಪಿಯ ಸ್ಮಾರಕಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪುರಾತನ ಸ್ಮಾರಕಗಳಿಗೆ ಹೆಸರಾಗಿರುವ ಹಂಪಿಯಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ವಿಶ್ವ ಪ್ರಸಿದ್ಧ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಎರಡೂ ಕಣ್ಣು ಸಾಲದು ಎನ್ನುವಂತಿತ್ತು. ಹೌದು! ಐತಿಹಾಸಿಕ ಹಂಪಿಯ ಪರಿಸರ ಮಳೆಯಲ್ಲಿ ಇನ್ನಷ್ಟು ಮನಮೋಹಕವಾಗಿ ಗೋಚರಿಸುವ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಶುಕ್ರವಾರ ಸುರಿದ ಮಳೆಗೆ ಹೇಮಕೂಟದಲ್ಲಿ ಸಣ್ಣದಾದ ಜಲಪಾತವೇ ನಿರ್ಮಾಣವಾಗಿದ್ದರೆ, ಹಂಪಿಯ ವಿಜಯವಿಠ್ಠಲ ದೇವಸ್ಥಾನದಲ್ಲಿನ ಕಲ್ಲಿನ ತೇರು, ಮಹಾನವಮಿದಿಬ್ಬ, ಕಮಲ್ ಮಹಲ್ ಸೇರಿದಂತೆ ಇನ್ನಿತರ ಸ್ಮಾರಕಗಳು ಮನಸ್ಸಿಗೆ ಮುದ ನೀಡುತ್ತಿದ್ದವು. ಮಳೆ ನಿಂತರೂ, ಹರಿಯುವ ನೀರಿನ ಕಲವರ ಪ್ರವಾಸಿಗರ ಕಣ್ಮನ ತಣಿಸಿತು.
ಇಲ್ಲಿ ಮಾತ್ರವಲ್ಲ, ಮಳೆಗಾಲದಲ್ಲಿ ಹಂಪಿಯ ಕೆಲ ಪ್ರಸಿದ್ಧ ಸ್ಮಾರಕಗಳ ಬಳಿ ಇರುವ ಬೆಟ್ಟ-ಗುಡ್ಡಗಳ ನಡುವೆ ಹರಿಯುವ ನೀರು ಸಣ್ಣನೇ ಜಲಪಾತದಂತೆ ಕಂಡು ಬರುತ್ತವೆ. ಹೀಗಾಗಿ ಸ್ಥಳೀಯ ಛಾಯಗ್ರಾಹಕರು, ದೇಶ-ವಿದೇಶದ ಪ್ರವಾಸಿಗರು, ಹಂಪಿಯತ್ತ ಮುಖ ಮಾಡುತ್ತಾರೆ.
ಮಳೆಯಲ್ಲಿ ಹಂಪಿಯ ಪುರಾತನ ಸ್ಮಾರಕಗಳ ಶಿಲ್ಪ ವೈಭವ ನೋಡುವುದೇ ಕಣ್ಣಿಗೆ ಹಬ್ಬನ್ನುಂಟು ಮಾಡುತ್ತದೆ. ಹೀಗಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೇ ಪ್ರವಾಸಿಗರು ಸ್ಮಾರಕಳ ಮನಮೋಹಕ ದೃಶ್ಯವನ್ನು ಕಂಡು ಸಂಭ್ರಮಿಸುತ್ತಿದ್ದಾರೆ