ಫೇಸ್ ಬುಕ್ ಫೇಕ್ ಲವ್..!?

228

ತುಮಕೂರು/ಕೊರಟಗೆರೆ:ಫೇಸ್ಬುಕ್ ನಲ್ಲಿ ಶ್ರೀಮಂತ ಯುವಕರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಹಣ ವಸೂಲಿ ಮಾಡುತಿದ್ದಳು ಎಂಬ ಆರೋಪದಡಿ ಬೆಸ್ಕಾಂ ನ ಮಹಿಳಾ ಎಫ್ ಡಿ ಎ ಯನ್ನು ಕೊರಟಗೆರೆ ಪೊಲೀಸರು ಬಂಧಿಸಿರು ಘಟನೆಬನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೊಗ್ಗನಳ್ಳಿಯ ನಿವಾಸಿ ದೊಡ್ಡಮಣಿ ಬಂಧಿತ ಆರೋಪಿ..ಈಕೆ ಕಳೆದ ಮೂರು ವರ್ಷದಿಂದ ಫೇಸ್ ಬುಕ್ ನಲ್ಲಿ ಶ್ರೀಮಂತ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ವಿಳಾಸ ಮತ್ತು ಮೊಬೈಲ್ ಸಂಖ್ಯೆ ಪಡೆದುಕೊಂಡು ಸ್ನೇಹ ಸಂಪಾದಿಸುತಿದ್ದಳು.. ನಂತರ ಸಿನಿಮಾ, ಪಾರ್ಕ್ ಗೆ ಬರುವಂತೆ ಒತ್ತಾಯಿಸುತಿದ್ದಳು..ಈ ವೇಳೆಯಲ್ಲಿ ಜೊತೆಯಲ್ಲಿ ಫೋಟೋ ತೆಗೆದುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತಿದ್ದಳು ಎನ್ನಲಾಗಿದೆ.. ಅಲ್ಲದೆ ಈಕೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಾಲ್ಕಕ್ಕೂ ಹೆಚ್ಚು ಯುವಕರ ವಿರುದ್ದ ದೂರು ನೀಡಿದ್ದಳು.. ದೊಡ್ಡಮಣಿ ಅಂಗವಿಕಲೆಯಾಗಿದ್ದು,ಇದೇ ದುರುಪಯೋಗ ಪಡೆಸಿಕೊಂಡು ಅನೇಕರನ್ನು ವಂಚಿಸಿದ್ದಾಳೆ..ಈ ದೂರಿನ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರಿಗೆ ವಂಚಕಿಯ ನಿಜ ಬಣ್ಣ ತಿಳಿದಿದೆ.ಈಕೆ ಮಧುಗಿರಿಯ ಬೆಸ್ಕಾಂ ವಿಭಾಗದಲ್ಲಿ ಎಫ್ ಡಿ ಎ ಆಗಿ ಕೆಲಸ ಮಾಡುತಿದ್ದು, ಇದೀಗ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ,,ನ್ಯಾಯಾಂಗ ಬಂಧನದಲ್ಲಿರುವುದಾಗಿ ತಿಳಿದುಬಂದಿದೆ

 

ವರದಿ: ಎನ್ ಜಿ.ಹಳ್ಳಿ. ಮಹೇಶ್