ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ?

376

ಬಳ್ಳಾರಿ /ಹೊಸಪೇಟೆಯಲ್ಲಿ ಇನ್ನೆಷ್ಟು ಜನ ಜಾರಿ ಬೀಳಬೇಕು?- ಕೈ-ಕಾಲು ಮುರಿದುಕೊಂಡರೆ ಯಾರು ಹೊಣೆ? ಜನಪ್ರತಿನಿಧಿಗಳೊ ಕಣ್ಣು ಮುಚ್ಚಿ ಕುಳಿತಿದ್ದಾರೆಯೇ? ಜಿಲ್ಲಾಡಳಿತಕ್ಕೆ ಜನರ ಗೋಳು ಕಾಣುತ್ತಿಲ್ಲವೇ?-ನಾಗರಿಕರ ಪ್ರಶ್ನೆ

ಕೇಂದ್ರ ಸರಕಾರದ ಅಮೃತ ಯೋಜನೆ ಜಾರಿಯಾಗಿದ್ದರೂ ಕುಂಟುತ್ತಾ ಸಾಗಿರುವ ಕಾಮಗಾರಿಯಿಂದಾಗಿ ಜನ್ರು ಜಾರಿ ಬಿದ್ದು ಕೈ-ಕಾಲು ಮುರಿದುಕೊಂಡು ನರಳಾಡುವಂತಾಗಿದೆ.

ಹೌದು….

ನಾವು ಹೇಳ್ತಿರೋದು ವಿಶ್ವಪ್ರಸಿದ್ಧ ಹಂಪಿಯ ಹೊಸಪೇಟೆ ಪಟ್ಟಣದ್ದು.
ಅವೈಜ್ಣಾನಿಕ ಕಾಮಗಾರಿಯಿಂದಾಗಿ ಜನ್ರು ಹಿಡಿಶಾಪ ಹಾಕುತ್ತಿದ್ದರೂ ಸ್ಥಳೀಯ ಶಾಸಕರಿಗೂ ಮತ್ತು ಜಿಲ್ಲಾಡಳಿತಕ್ಕೂ ಅದು ಕೇಳಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

ಇಷ್ಟಕ್ಕೂ ಹೊಸಪೇಟೆ ನಗರಕ್ಕೆ ಕೇಂದ್ರ ಸರ್ಕಾರದ ಅಮೃತ ಯೋಜನೆ ಜಾರಿ ಆಗಿದ್ದೇನೋ ಸರಿ. ಆದರೆ, ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಟಿ.ಬಿ.ಡ್ಯಾಂ ರಸ್ತೆಯ ಗೋಕುಲನಗರದಲ್ಲಿ ರಸ್ತೆ ಯಾವುದು? ಚರಂಡಿ ಯಾವುದು? ಅಂತ ಜನ್ರು ಹುಡುಕುವಷ್ಟರಲ್ಲಿ ಜಾರಿ ಬಿದ್ದು ಮೈ+ಕೈ ಎಲ್ಲಾ ಕೆಸರು ಮಾಡಿಕೊಳ್ಳುವ ದಯನೀಯ ಸ್ಥಿತಿ ತಲುಪಿದೆ.

ನಗರಸಭೆಯ 30 ನೇ ವಾರ್ಡ್ ನಲ್ಲಿರುವ ಗೋಕುಲನಗರದಲ್ಲಿ ಶ್ರೀಕೃಷ್ಣ ಮಂದಿರ, ಇಂಜಿನಿಯರಿಂಗ್ ಕಾಲೇಜು, ಸಾಯಿಬಾಬಾ ಸರ್ಕಲ್ ಇದೆ. ಬೆಳೆಯುತ್ತಿರುವ ಈ ನಗರದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇಲ್ಲಿನ ನಾಗರಿಕರು ಅನೇಕ ಬಾರಿ ನಗರಸಭೆಗೆ ಮನವಿ ಮಾಡಿ ತಮ್ಮ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸುವಂತೆ ಮನವಿ ಮಾಡಿದ್ರು.

ಇದೀಗ ಅಮೃತ ಯೋಜನೆಯಡಿ ಒಳಚರಂಡಿ ಕಾಮಗಾರಿ ನಡೆದಿದೆ. ಆದ್ರೆ, ಕಳೆದ ಎರಡು ತಿಂಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಇಲ್ಲಿ ಮಳೆ ಬಂದ್ರೆ ದೊಡ್ಡದೊಂದು ಪ್ರವಾಹವೇ ಉಂಟಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ರಸ್ತೆಯ ಪಕ್ಕದಲ್ಲಿ ಜಮಾವಣೆಗೊಂಡ ನೀರಿನಿಂದ ಇಲ್ಲಿನ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ‌ ಬೀರುತ್ತಿದೆ.

ವಿಪರೀತ ಸೊಳ್ಳೆಗಳು ಮತ್ತು ವಿಷಕಾರಕ ಜಂತುಗಳ ಕಾಟವೂ ಇದೆ. ಅಧಿಕಾರಿಗಳು ಕಾಟಾಚಾರಕ್ಕೆ ಕಾಮಗಾರಿ ನಡೆಸದೇ ವೈಜ್ಞಾನಿಕವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಅಂದಹಾಗೆ, ಹೊಸಪೇಟೆ ನಗರದಲ್ಲಿ ಒಳಚರಂಡಿ ಕಾಮಗಾರಿಗಾಗಿ 91 ಕೋಟಿ ರೂಪಾಯಿ ಹಣ ಬಿಡುಗಡೆ ಆಗಿದೆ. ಕುಡಿಯುವ ನೀರಿಗಾಗಿ 52 ಕೋಟಿ ರೂ. ಬಿಡುಗಡೆ ಆಗಿದೆ. ಇದರಲ್ಲಿ ಕೇಂದ್ರದ ಅನುದಾನ ಶೇ 50 ರಷ್ಟು, ರಾಜ್ಯ ಸರ್ಕಾರದ ಅನುದಾನ ಶೇ 20 ರಷ್ಟು ಮತ್ತು ಹೊಸಪೇಟೆ ನಗರಸಭೆಯ ಶೇ 30 ಅನುದಾನ ಬಳಕೆ ಆಗುತ್ತಿದೆ. ಕೇವಲ ಕಾಟಾಚಾರಕ್ಕೆಂದು ಕಾಮಗಾರಿ ಆರಂಭಿಸದೇ ವೈಜ್ಞಾನಿಕವಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

 

ಬೈಟ್: ನಾಗರಾಜ್ ಹೊಸಪೇಟೆ.