ಕರುವಿನ ಮೇಲೆ ಹರಿದು ಹೋದ ಟಾಟಾ ಸುಮೋ..

449

ರಸ್ತೆಯಲ್ಲೇ ಮೃತ ಪಟ್ಟ ಕರು-ಅಮ್ಮನ ರೋದನ-ಹೊಸಪೇಟೆಯ ಸಿದ್ಧಿಪ್ರಿಯ ಕಲ್ಯಾಣ ಮಂಟಪದ ಬಳಿ ನಡೆದ ಘಟನೆ..

ಬಳ್ಳಾರಿ /ಹೊಸಪೇಟೆ,
ತನ್ನ ಹೆತ್ತಮ್ಮನ ಜೊತೆ ಹುಲ್ಲು ಮೇಯಲು ತೆರಳಿದ್ದ ಕರುವಿನ ಮೇಲೆ ಟಾಟಾ ಸುಮೋ ವಾಹನವೊಂದು ಹರಿದು ಕರು ರಕ್ತದ ಮಡುವಿನಲ್ಲಿ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ.

ತನ್ನ ಕರುಳ ಕುಡಿ ಹೀಗೆ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದರೂ ಅಮ್ಮ ಹಸು ಮಾತ್ರ ತನ್ನ ಕಂದನನ್ನು ಎಬ್ಬಿಸುವ ಪ್ರಯತ್ನ ದಲ್ಲಿರುವುದು ಎಂಥವರಿಗೂ ಕರುಳು ಕಿವುಚುವಂತಿತ್ತು.

ಹೊಸಪೇಟೆ ನಗರದಿಂದ ಹಾದು ಹೋಗುವ ರಸ್ತೆಗೆ ಬೈಪಾಸ್ ರಸ್ತೆಯೂ ಕೂಡ ಅಲ್ಲಿ ಸಂಪರ್ಕ ಸಾಧಿಸುವುದರಿಂದ ಎರಡೂ ಕಡೆ ವಾಹನಗಳು ಎಗ್ಗಿಲ್ಲದೇ ಓಡಾಡುತ್ತಿವೆ. ಇಲ್ಲಿ ಅನೇಕ ಬಾರಿ ರಸ್ತೆ ಅಪಘಾತಗಳು ಸಂಭವಿಸಿವೆ. ರೋಡ್ ಬ್ರೇಕರ್ ಗಳನ್ನು ಅಳವಡಿಸುವಂತೆ ಅನೇಕ ಬಾರಿ ನಾಗರಿಕರು ಮನವಿ ಮಾಡಿದರೂ ಪ್ರಯೋಜನವಿಲ್ಲದಾಗಿದೆ.

ಹೀಗಾಗಿ, ಈ ರೀತಿಯ ರಸ್ತೆ ಅಪಘಾತ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ.

ಇನ್ನಾದರೂ ಇಲ್ಲಿ ರಸ್ತೆ ತಡೆ ನಿರ್ಮಿಸಬೇಕು ಅಥವಾ ಸಿಗ್ನಲ್ ಗಳನ್ನು ಅಳವಡಿಸಬೇಕು. ಕನಿಷ್ಟ ಸಂಚಾರಿ ಪೊಲೀಸರನ್ನಾದರೂ ಕರ್ತವ್ಯಕ್ಕೆ ನಿಯೋಜಿಸಬೇಕೆಂದು ಸಾರ್ವಜನಿಕರು ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.