ಮದ್ಯ ವರ್ಜನೆ ಕುಟುಂಬ ರಕ್ಷಣೆ

387

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ:ಮದ್ಯ ವರ್ಜನ ಶಿಬಿರದ ಮೂಲಕ ಮದ್ಯ ವ್ಯಸನಿಗಳಿಗೆ 5 ದಿನಗಳ ಜಾಗೃತಿ ಶಿಬಿರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಬೆಳ್ತಂಗಡಿ ಅಖಿಲ ಕರ್ನಾಟಕ ಜಾಗೃತಿ ವೇದಿಕೆ ವತಿಯಿಂದ
ವರದನಾಯಕನಹಳ್ಳಿ ಶ್ರೀ ಪಟಾಲಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ನಡೆಯಿತು

ಕುಟುಂಬ ನಿರ್ವಹಣೆ ಮಾಡುವಂತ ವ್ಯಕ್ತಿಗಳು ಪ್ರತಿ ದಿನ ಮದ್ಯಪಾನ ದುಷ್ಚಟಗಳಿಗೆ ಬಲಿಯಾದರೆ ತನ್ನ ಇಡೀ ಕುಟುಂಬವು ಬೀದಿಪಾಲಾದರು ಸಹ ಅದನ್ನು ಅರ್ಥ ಮಾಡಿಕೊಳ್ಳಲು ಆಗದಂತಹ ಹೀನಾಯ ಸ್ಥಿತಿಯ ರೀತಿಯಲ್ಲಿ ಮದ್ಯ ವೆಸನಿಗಳ ಬದುಕು ಆಗಿರುತ್ತದೆ. ವ್ಯಕ್ತಿ ತನ್ನ ಘನತೆಯ ಮೌಲ್ಯವನ್ನು ಉಳಿಸಿಕೊಳ್ಳಬೇಕಾದರೆ ಕುಡಿತಕ್ಕೆ ದಾಸರಾಗಬಾರದು ಎಂದು ಮಾಜಿ ಸಚಿವ ವಿ. ಮುನಿಯಪ್ಪ ಹೇಳಿದರು.

ಮನುಷ್ಯನ ಜೀವನಕ್ಕೆ ಅಮುಲ್ಯವಾದ ಬೆಲೆಯಿದೆ ಪ್ರತಿಯೊಂದು ಕುಟುಂದಲ್ಲು ತಂದೆ ತಾಯಿ ಹೆಂಡತಿ ಮಕ್ಕಳು ಎಲ್ಲರು ಸಹ ಮನೆಯ ಯಜಮಾನನನ್ನು ನಂಬಿ ಬದುಕುತ್ತಿರುತ್ತಾರೆ. ಮನೆಯ ಜವಾಬ್ದಾರಿ ಹೊತ್ತಂತ ಯಜಮಾಜ ಕುಡಿತದ ದುಷ್ಚಟಗಳಿಗೆ ಒಳಗಾಗದೆ ಹಣವನ್ನು ಉಳಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಕ್ಕಳು ಮನೆಗೆ ಕೀರ್ತಿ ತರುವಂತ ರೀತಿಯಲ್ಲಿ ಮನೆಯ ಯಜಮಾನ ತನ್ನ ಕುಟುಂಬದ ಘನತೆಯನ್ನು ಕಪಾಡಿಕೊಂಡು ಸಮಾಜಕ್ಕೆ ಮಾದರಿಯಾಗುವಂತ ವ್ಯಕ್ತಿಯಾಗಬೇಕು ಎಂದರು.

ಶ್ರೀಮಂತ ವ್ಯಕ್ತಿ ಆಗಬೇಕು ಎಂಬುದು ಬಡ ಜನರ ಆಲೋಚನೆಗಳು ಕಷ್ಟಪಟ್ಟು ದಿನವೆಲ್ಲಾ ದುಡಿದ ಹಣವನ್ನು ಕುಡಿತಕ್ಕೆಂದು ಖರ್ಚು ಮಾಡುತ್ತಿದ್ದರೆ ಶ್ರೀಮಂತನಾಗಲು ಹೇಗೆ ಸಾಧ್ಯ, ಸಂಸಾರದಲ್ಲಿ ಎದುರಾಗುವಂತ ಅನೇಕ ತೊಂದರೆಗಳಿಗೆ ಸಾಲ ಮಾಡಿ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಿ ಕೊನೆಗೆ ಒಂದೊತ್ತಿನ ಊಟಕ್ಕಾಗಿ ಜೀವನ ನಡೆಸುವುದು ಕಷ್ಟಕರವಾಗುತ್ತದೆ.

ಈಗಿನ ಯುವಕರು ಕುಡಿತಕ್ಕೆ ಹೆಚ್ಚು ಒಳಗಾಗಿ ತಮ್ಮ ಯುವ ಶಕ್ತಿಯನ್ನು ಹಾಳುಮಾಡಿಕೊಂಡು ಯುವಕರು ಅನಾರೋಗ್ಯದಿಂದ ನರಳುವಂತಾಗದೆ ಎಚ್ಚರ ವಹಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಮೋಹನ್ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಹಾಫ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ಹಂಡಿಗನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಕಸಾಪ ಮಾಜಿ ಅಧ್ಯಕ್ಷ ಕೃ.ನಾ ಶ್ರೀನಿವಾಸ್, ವರದನಾಯಕನಹಳ್ಳಿ ನಾಗರಾಜಪ್ಪ, ಮದ್ಯ ವರ್ಜನ ಸಮಿತಿ ಅಧ್ಯಕ್ಷ ಕಂಪನಿ ದೇವರಾಜ್, ಉಪಾಧ್ಯಕ್ಷ ತ್ಯಾಗರಾಜು, ಸದಸ್ಯೆ ಮಾಣಿಕ್ಯಮ್ಮ, ಬಾಗೇಪಲ್ಲಿ ದಿನೇಶ್, ಹಾಗೂ ಮುಂತಾದವರು ಭಾಗವಹಿಸಿದ್ದರು.