ಮಾನವೀಯತೆ ಮೆರೆದ ಬೀದಿ ಬದಿಯ ವ್ಯಾಪಾರಿಗಳು

413

ಅಘೋಷಿತ ಬಂದ್ ಆಚರಣೆ ನಡುವೆಯೂ ಮಾನವೀಯತೆ ಮೆರೆದ ಬೀದಿ ಬದಿಯ ವ್ಯಾಪಾರಿಗಳು.
ತುಮಕೂರು/ಪಾವಗಡ:ಇಂದು ನಡೆಯುತ್ತಿರುವ ಅಘೋಷಿತ ಬೆಂಬಲ ವ್ಯಕ್ತ ಪಡಿಸಿರುವ ಬೀದಿ ಬದಿಯಲ್ಲಿ ತಳ್ಳು ಗಾಡಿಯ ಮೂಲಕ ವ್ಯಾಪಾರ ವಹಿವಾಟು ಮಾಡುವ ಹಣ್ಣಿನ ವ್ಯಾಪಾರಿಗಳ ಸಂಘ ಮಾನವೀತೆ ಮೆರೆದಿದೆ.
ಪ್ರತಿನಿತ್ಯ ಬೀದಿ ಬದಿಯೇ ಇವರ ದುಡಿಮೆ ಆದರೂ ನಮಗೂ ಮಾನವೀಯತೆ ಇದೆ ಎಂದು ಕುಡಿಯುವ ನೀರು ಎಲ್ಲರಿಗೂ ಅವಶ್ಯ ಆದ್ದರಿಂದ ಪ್ರತಿಭಟನೆಗೆ ನಾವು ಸಾತ್ ನೀಡುತ್ತೇವೆ ಎಂದು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇಂದು ಪಾವಗ ತಾಲ್ಲೂಕು ಸಂಪೂರ್ಣ ಬಂದ್ ಆಗಿರೋ ಹಿನ್ನೆಲೆ ರೋಗಿಗಳಿಗೆ ಹಾಗು ಹೋರಗಡೆಯಿಂದ ಬರುವ ಪ್ರಯಾಣಿಕರಿಗೂ ಊಟದ ವ್ಯವಸ್ತೆ ಕಲ್ಪಿಸಿದ್ದಾರೆ.
ಕಳೆದ ವಾರವಷ್ಟೆ ಪಾವಗಡ ಮಾಜಿ ಶಾಸಕ ಹಾಗು ಸಚಿವ ವೆಂಕಟರವಣಪ್ಪ ಅವರೂ ನನ್ನದೂ ಬಂದ್ಗೆ ಬೆಂಬಲ ಇದೆ ಜಿಲ್ಲಾ ಮಂತ್ರಿಗಳೊಂದಿಗೆ ಮಾತನಾಡಿ ತಾಲ್ಲೂಕಿಗೆ ಕುಡಿಯುವ ನೀರು ತರಲು ನಿಮ್ಮೊಂದಿಗೆ ಹೋರಟ ಮಡ್ತಿನಿ ಅಂತ ಭರವಸೆ ಕೊಟ್ಟು ಹೋಗಿದ್ರು , ಮಾಜಿ ಸಚಿವರು ಜಿಲ್ಲಾ ಸಚಿವ ಟಿ ಬಿ ಜಯಚಂದ್ರ ಅವರನ್ನ ಬೇಟಿ ಮಾಡಿದ್ದಾರೊ ಇಲ್ಲವೊ ಪದೆ ಪದೆ ಗಡಿ ತಾಲ್ಲೂಕು ಪಾವಗಡದಲ್ಲಿ ಅಘೋಷಿತ ಬಂದ್ಗಳು ನೆಡೆಯುತ್ತಿದ್ದರೂ ಸಕಾ೯ರ ಇತ್ತ ಗಮನಹರಿಸಿಲ್ಲದಿರುವುದು ವಿಪಯಾ೯ಸ ಅಥವಾ ನಾಚಕೆಗೇಡಿನ ಸಂಗತಿ.
ಕನಿಷ್ಟ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ತರಿಗಿರುವ ಮಾನವೀಯತೆ ಇಲ್ಲಿನ ರಾಜಕಾರಣಿಗಿಲ್ಲ.
ಸಮಾಜದ ಕಳಕಳಿ ಇಲ್ಲದ ಜನಪ್ರತಿನಿದಿಗಳ ನಿಲ೯ಕ್ಷವೇ ಪಾವಗಡದ ಇಂದಿನ ಸ್ಥಿತಿಗೆ ಕಾರಣ ಗಡಿ ನಾಡು ಪಾವಗಡ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ.