ಈಕೆಯದು ಕಾಲ್ನಡಿಗೆ ಹೋರಾಟ ಎನ್ನಬಹುದೇ.?

563

ತುಮಕೂರು/ ಪಾವಗಡ :ಎರಡು ದಿನಗಳ ಪಾವಗಡ ಅಘೋಷಿತ ಬಂದ್ ನಿಂದ ಪ್ರಯಾಣಿಕರು ವಾಹನಸೌಕರ್ಯವಿಲ್ಲದೆ ಪರದಾಟ. ಬಸ್ ಸಂಚಾರ ವಿಲ್ಲದೆ ಮಡಕಶಿರ ತಾಲ್ಲೂಕಿನ ಆಮಿದ್ಯಾಲಗೊಂದಿ ಗ್ರಾಮದ ಬಾಣತಿ ಮಮತ ತನ್ನ ಪುಟ್ಟ ಕಂದ ಮತ್ಯು ಆಕೆಯ ಪೋಷಕರೊಂದಿಗೆ ಕಾಲ್ನಡಿಗೆಯಲ್ಲೆ ಹೊರಟಿದ್ದು ನೀರಿಗಾಗಿವಇದೂ ಒಂದು ರೀತಿಯ ಬಂದ್ ಗೆ ಗೃಹಿಣಿ ಪರೋಕ್ಷ ಹೋರಾಟದಂತಿತ್ತು. ಬಸ್ ಇಲ್ಲದೆ ಇದ್ದರೂ ತೊಂದರೆಯಿಲ್ಲ ನಮಗೆ ನೀರು ಸಿಗುವಂತಾಗಲೀ ಎಂಬ ಭಾವನೆ,ದಿಟ್ಟತನ ಆಕೆಯ ಮುಖದಲ್ಲಿ ಗೋಚರಿಸುತಿತ್ತು.ಬಿ.ಕೆ.ಹಳ್ಳಿ ಗ್ರಾಮಕ್ಕೆ ತಮ್ಮ ಕುಟುಂಬದೊಂದಿಗೆ ಕಾಲು ನಡಿಗೆಯಲ್ಲಿ ಸಾಗುತ್ತಿರುವ ಈಚಿತ್ರ
ಪರೋಕ್ಷವಾಗಿ ಬಂದ್ ಗೆ ಸಾಕ್ಷಿಯಾಗಿತ್ತು.

ಒಟ್ಟಾರೆ ನೋಡುಗರಿಗೆ ಈಕೆಯದು ಒಂದುರೀತಿಯ ಕಾಲ್ನಡಿಗೆ ಹೋರಾಟವೇ ಎನ್ನುವ ಪ್ರಶ್ನೆ ಮೂಡಿಸುವಂತಿತ್ತು.!