ಅಭಿನಂದನಾ ಸಮಾರಂಭ

481

ಚಿಕ್ಕಬಳ್ಳಾಪುರ/ಚಿಂತಾಮಣಿ :-ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಚಿಂತಾಮಣಿ ನಗರಸಭೆ ಮಹಮ್ಮದ್ ಷಫೀಕ್ ರನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೆಗೌಡ ಆಯ್ಕೆ ಮಾಡಿ ಆದೇಶ ಮಾಡಿದ್ದು,ಶಾಸಕ ಜೆ.ಕೆ ಕೃಷ್ಣಾರೆಡ್ಡಿರವರು ಮಹಮ್ಮದ್ ಷಫೀಕ್ ರವರಿಗೆ ಅಭಿನಂದನೆ ಸಲ್ಲಿಸಿ ಆತ್ಮೀಯವಾಗಿ ತಮ್ಮ ಗೃಹ ಕಛೇರಿ ಯಲ್ಲಿ ಸನ್ಮಾನಿಸಿ ಶುಭ ಹಾರೈಸಿದರು.

ಚಿಂತಾಮಣಿ ನಗರದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಗೃಹ ಕಛೇರಿ ಯಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಜೆ.ಡಿ.ಎಸ್ ರಾಜ್ಯ ಉಪಧ್ಯಾಕ್ಷರಾದ ಮಹಮ್ಮದ್ ಷಫೀಕ್ ರವರನ್ನು ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ರವರು ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿ ತಾಲ್ಲೂಕಿನ ಷಫೀಕ್ ಬಗ್ಗೆ ಹಾಗೂ ಅವರ ತಾತನವರದ ದಿವಂಗತ ಜಬ್ಬಾರ್ ಸಾಬ್ ಮತ್ತು ಅವರ ತಂದೆ ಜಲೀಲ್ ಸಾಬ್ರ ಸೇವೆಯ ಬಗ್ಗೆ ಕುಮಾರಸ್ವಾಮಿ ಯವರಿಗೆ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಇಂದು ಇವರನ್ನು ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿರುವುದು ಸಂತೋಷ ವಾಗಿಯೆಂದು ಅವರು ರಾಜ್ಯಧ್ಯಂತ ಮುಂದಿನ 2018ರ ವಿಧಾನ ಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷವನ್ನು ಸಂಘಟನೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಎಂ.ಎಲ್ ಎ ಸ್ಥಾನಗಳು ಗೆದ್ದು ಕುಮಾರಸ್ವಾಮಿ ಯವರನ್ನು ಮುಖ್ಯ ಮಂತ್ರಿ ಯನ್ನಾಗಿ ಮಾಡಲು ದುಡಿಯುವಂತೆ ಕಿವಿ ಮಾತು ಹೇಳಿದರು.
ನೂತನ ಉಪಾಧ್ಯಕ್ಷ ಮಹಮ್ಮದ್ ಷಫೀಕ್ ಮಾತನಾಡಿ ಎಲ್ಲರಿಗೂ ಸಮಪಾಲು ಎಲ್ಲರಿಗೂ ಸಮ ಬಾಳು ಎಂಬ ಉದ್ದೇಶದಿಂದ ನಮ್ಮ ಜನಪ್ರೀಯ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ನಮ್ಮ ಅಲ್ಪ ಸಂಖ್ಯಾತರನ್ನು ಗುರ್ತಿಸಿ ಎಲ್ಲರಂತೆ ನಮ್ಮನ್ನು ಮೇಲೆತ್ತುವ ನಿಟ್ಟಿನಲ್ಲಿ ಉನ್ನತ ಜವಾಬ್ದಾರಿ ಯನ್ನು ನೀಡಿದ್ದು ,ಅದರಂತೆ ತಾಲ್ಲೂಕು ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ನನ್ನ ಶಕ್ತಿ ಮಿರಿ ದುಡಿಯುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಟಿ.ಎನ್ ರಾಜಗೋಪಾಲ್ .ನಗರಸಭೆ ಸದಸ್ಯರಾದ ಆರ್ ಪ್ರಕಾಶ್, ವೆಂಕಟರವಣಪ್ಪ, ಮಂಜುನಾಥ, ಜೆಡಿಎಸ್ ತಾ.ಉಪಾಧ್ಯಕ್ಷ ದಿನ್ನಮಿಂದಪಲ್ಲಿ ಬೈರಾರೆಡ್ಡಿ, ನಗರ ಘಟಕದ ಅಧ್ಯಕ್ಷ ಬಿ.ವಿ ಮಂಜುನಾಥಾಚಾರಿ, ತಾ.ಯುವ ಘಟಕದ ಅಧ್ಯಕ್ಷ ಗೋಪಲ್ಲಿ ರಘು, ‌ಮುಖಂಡರಾದ ಪೆದ್ದೂರು ನಾಗರಾಜರೆಡ್ಡಿ,ಗುಡೇ ಶ್ರೀನಿವಾಸರೆಡ್ಡಿ ,ಚಂದ್ರಾರೆಡ್ಡಿ,ಮಾಳಪಲ್ಲಿ ಶಂಕರ್ ರೆಡ್ಡಿ, ಸಾಧಿಕ್ ಪಾಷ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.