ಹೈವೇ ರಾಬ್ರಿ ಗ್ರಾಂಗ್ ಮೇಲೆ ಪೊಲೀಸರ ದಾಳಿ

302

ಕೋಲಾರ: ಹೈವೇ ರಾಬ್ರಿ ಗ್ರಾಂಗ್ ಮೇಲೆ ಪೊಲೀಸರ ದಾಳಿ. ಡಿವೈಎಸ್ಪಿ ಅಬ್ದುಲ್ ಸತ್ತಾರ್ ಮಧ್ಯರಾತ್ರಿ ಗಸ್ತು ವೇಳೆ ಹೈವೇ ರಾಬ್ರಿ ಗ್ಯಾಂಗ್ ಮೇಲೆ ದಾಳಿ, ಪೊಲೀಸರನ್ನು ಕಂಡು ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಹೊಂಡಾ ಕಾರು ಬಿಟ್ಟು ಪರಾರಿ. ಕೋಲಾರ ನಗರ ಸಮೀಪ ರಾಷ್ಟ್ರೀಯ ಹೆದ್ದಾರಿ-75 ಪವನ್ ಕಾಲೇಜು ಬಳಿ ಘಟನೆ. ರಾಬ್ರಿ ಗ್ಯಾಂಗ್ ಕತ್ತಲೆಯಲ್ಲಿ ತಲೆಮರೆಸಿ ಕೊಂಡಿದ್ದು ಪೊಲೀಸರಿಂದ ಹುಡುಕಾಟ. ಪೊಲೀಸರು ವಶಪಡಿಸಿಕೊಂಡ ಕಾರಿನಲ್ಲಿ ಪಿಸ್ತೊಲ್ , ಲಾಂಗ್, ಸ್ಪೆಯರ್, ಡ್ರಾಗನ್ ಚಾಕು, ದೂಣ್ಣೆ , ಪತ್ತೆ. ಕೋಲಾರ ನಗರ ಠಾಣೆ ಪೊಲೀಸರು ಕಾರನ್ನ ವಶಪಡಿಸಿಕೊಂಡ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.