ವಾರ್ಷಿಕ ಜಾತ್ರಾ ಮಹೋತ್ಸವ

339

ಬಳ್ಳಾರಿ /ಬಳ್ಳಾರಿ :ಆರೋಗ್ಯ ಮಾತೆಯ ವಾರ್ಷಿಕ ಜಾತ್ರಾ ಮಹೋತ್ಸವ-ಐಜಿಪಿ ಎಸ್ ಮುರುಗನ್ ಭಾಗಿ-ಲೋಕಕಲ್ಯಾಣಕ್ಕಾಗಿ ಮಾತೆಯ ತೇರು ಪವಿತ್ರೀಕರಿಸಿದ ಧರ್ಮಾಧ್ಯಕ್ಷ ಫಾ.ಹೆನ್ರಿ ಡಿ’ಸೋಜ
ಇಲ್ಲಿನ ದಂಡುಪ್ರದೇಶದಲ್ಲಿರುವ ಶ್ರೀ ಆರೋಗ್ಯ ಮಾತೆ ವಾರ್ಷಿಕ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಆರಂಭವಾಗಿದೆ.

ಸೆ.೮ರವರೆಗೆ ನಡೆವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಬಳ್ಳಾರಿ ಧರ್ಮ ಪ್ರಾಂತ್ಯದ ಅಧ್ಯಕ್ಷ ಫಾದರ್ ಹೆನ್ರಿ ಡಿ’ಸೋಜ ಅವರು ಆರೋಗ್ಯ ಮಾತೆಯ ತೇರು ಮತ್ತು ಧ್ವಜ ಪವಿತ್ರೀಕರಿಸಿ ಜಾತ್ರೆಗೆ ಚಾಲನೆ ನೀಡಿದರು.

ಬಳ್ಳಾರಿ ವಲಯ ಐಜಿಪಿ ಎಸ್.ಮುರುಗನ್ ಅವರೂ ಸಹ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ವಾದ್ಯಗಳೊಂದಿಗೆ ಅವರನ್ನು ಮಂದಿರದೊಳಗೆ ಆಹ್ವಾನಿಸಲಾಯಿತು.

ಸೆ.೮ರಂದು ರಾತ್ರಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾತ್ರೆ ಸಾಂಗವಾಗಿ ಪೂರ್ಣಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಆರೋಗ್ಯಮಾತೆ ಚರ್ಚ್ ನ ಫಾದರ್ ಜ್ಞಾನಪ್ರಕಾಶ್, ಪೀಟರ್, ಭಗವಂತರಾಜ್ ಸೇರಿದಂತೆ ವಿವಿಧ ಸಮುದಾಯ, ಧರ್ಮಗಳ ಮುಖಂಡರು ಹಾಗೂ ಜನಪ್ರತಿನಿಧಿಗಳು ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.