“ಕಲ್ಲಿನ ತೇರು” ನೃತ್ಯ ಶಾಲೆ ಆರಂಭ

359

ಬಳ್ಳಾರಿ/ ಬಳ್ಳಾರಿ: ನಗರದಲ್ಲಿ ಕಲ್ಲಿನ ತೇರು ನೃತ್ಯ ಶಾಲೆ ಆರಂಭ-ಎಲ್ಕೆಜಿ ಯಿಂದ 1ನೇ ತರಗತಿ ಮಕ್ಕಳಿಗೆ ಉಚಿತ ಕಲಿಕೆ-ಪ್ರತಿ ಶನಿವಾರ ಮತ್ತು ಭಾನುವಾರ ತರಗತಿಗಳು ಆರಂಭ-ನೃತ್ಯ ಗುರು ವಸಂತ್ ಕುಮಾರ್ ಹೇಳಿಕೆ

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 31 ನೇ ವಾರ್ಡಿನಲ್ಲಿ ನೂತನವಾಗಿ *ಕಲ್ಲಿನತೇರು ನೃತ್ಯಶಾಲೆ* ಆರಂಭವಾಗಿದೆ.ಬಳ್ಳಾರಿ ಹುಡ್ಗ ವಸಂತ್ ಕುಮಾರ್ ನೃತ್ಯ ಶಾಲೆಯ ಸಂಸ್ಥಾಪಕ. ಈ ಶಾಲೆಗೆ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಚಾಲನೆನೀಡಿದರು.

ಹೌದು…

ವಸಂತ್ ಕುಮಾರ್ ಒಬ್ಬ ಅಸಾಮಾನ್ಯ ಪ್ರತಿಭೆ. ಸ್ಲಂ ಏರಿಯಾ ಎಂದು ಕರೆಯಲ್ಪಡುವ ಮುಂಡ್ಲೂರು ರಾಜೇಶ್ವರಿ ನಗರದಲ್ಲಿನ ಸರ್ಕಾರಿ ಶಾಲೆಯಲ್ಲಿ ಅಕ್ಷರ ಕಲಿತ ಈ ಪ್ರತಿಭೆ ಡಿಪ್ಲೊಮಾ ವ್ಯಾಸಂಗ ಮಾಡಿ ಉತ್ತರದ ಗುಜರಾತಿನಲ್ಲಿ ಉದ್ಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿಯನ್ನು ಹರಡಿದ ಪ್ರತಿಭೆ.
ಇದೀಗ ಜಿಲ್ಲೆಯ ಜಿಂದಾಲ್ ಕಾರ್ಖಾನೆಯಲ್ಲಿ ಉದ್ಯೋಗ ಮಾಡಿಕೊಂಡು ತಾನು ಕಲಿತ ವೈವಿಧ್ಯಮಯ ಜಾನಪದ, ದೇಶೀಯ, ಶಾಸ್ತ್ರೀಯ ನೃತ್ಯ ಪ್ರಾಕಾರಗಳೊಂದಿಗೆ ಪಾಶ್ಚಾತ್ಯ ನೃತ್ಯವನ್ನು ಕಲಿಸಲು ಹೊರಟಿದ್ದಾರೆ.
ಕಲೆ ಮತ್ತು ಸಂಗೀತದಲ್ಲಿ ಅತೀವ ಆಸಕ್ರಿ ಹೊಂದಿರುವ ವಸಂತ್ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 4 ಗಂಟೆಯಿಂದ ನೃತ್ಯಾಭ್ಯಾಸದ ಜೊತೆ ಸಂಸ್ಕೃತಿ ಬೆಳೆಸಲು ಪಣ ತೊಟ್ಟಿದ್ದಾರೆ.ಎಲ್ ಕೆಜಿ ಯಿಂದ 1ನೇ ತರಗತಿಯ ಮಕ್ಕಳಿಗೆ ಉಚಿತ ಡ್ಯಾನ್ಸ್ ಕಲಿಸಿಕೊಡಲಿದ್ದಾರೆ. ಉಳಿದ ಎಲ್ಲ ವಯೋಮಾನದವರಿಗೆ ಫೀಸು ಪಡೆದು ನೃತ್ಯ ಕಲಿಸಿಕೊಡಲಿದ್ದಾರೆ.
ಅಂದಹಾಗೆ ಇಂದಿನಿಂದ ಆರಂಭವಾದ ಈ ಡ್ಯಾನ್ಸ್ ಕ್ಲಾಸ್ ಗೆ ರಾವ್ ಬಹಾದ್ದೂರ್ ವೈ.ಮಹಾಬಳೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ತಿಪ್ಪನಗೌಡ, ಪೊಲೀಸ್ ಅಧಿಕಾರಿ ಆಂಜನೇಯಲು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರೋತ್ಸಾಹಿಸಿ ವಸಂತ್ ಕಾರ್ಯಕ್ಕೆ ಪ್ರೋತ್ಸಾಹಿಸಿದ್ದಾರೆ.