ವಯೋನಿವೃತ್ತಿ ಬಿಳ್ಕೋಡಿಗೆ ಕಾರ್ಯಕ್ರಮ

260

   ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬೇಕಾದರೆ ಆ ವ್ಯಕ್ತಿಯ ನಿವೃತ್ತಿ ನಂತರದಲ್ಲೆ ಸಾಧ್ಯ ಎಂದು ಬಿಇಒ ಎಲ್‍ಡಿ.ಜೋಷಿ ಹೇಳಿದರು.

ನಗರದ ವಾಲ್ಮೀಕಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ವಯೋನಿವೃತ್ತಿ ಬಿಳ್ಕೋಡಿಗೆ ಹಾಗೂ ಮಕ್ಕಳಿಗೆ ಲೋಟ, ತಟ್ಟಿ ವಿತರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಶಿಕ್ಷಕರಾದಂತವರು ಮ್ಕಕಳಿಗೆ ಪಠ್ಯದ ಜತೆಗೆ ನೀತಿ ಬೋತನೆ ಕಲಿಸಬೇಕು. ಇದರಿಂದ ಶಿಕ್ಷರ ಗೌರವ ಹೆಚ್ಚುತ್ತದೆ. ಇದಕ್ಕೆ ಸಾಕ್ಷಿ ಈಗ ನೀವೃತ್ತಿ ಸ್ವೀಕರಿಸುತ್ತಿರುವ ಎಸ್‍ಎಮ್. ರುದ್ರಮುನಿ ಜೀವಂತ ಸಾಕ್ಷಿ. ಇದರಿಂದ ಇವರು ಮ್ಕಕಳಿಗೆ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಣ ಪ್ರೇಮಿಗಳು ಶಿಕ್ಷಣದ ಅಭಿವೃದ್ದಿಗೆ ಒತ್ತು ನೀಡಬೇಕು. ಅಲ್ಲದೆ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಶಾಲೆ ಬಗ್ಗೆ ಕಳಕಳಿ ಇಟ್ಟುಕೊಂಡು, ಸ್ವಯಂ ಪ್ರೇರಣೆಯಿಂದ ಶಾಲೆಗೆ ಅವಶ್ಯ ಇರುವ ಸಾಮಾಗ್ರಿಗಳನ್ನು ಪೂರೈಸುತ್ತಿರುವುದು ಶ್ಲಾಘನೀಯ ಎಂದರು. ಸಮಾಜ ಸೇವಕ ಜಡಿ ವೆಂಕಟೇಶ್ ವಿದ್ಯಾರ್ಥಿಗಳಿಗೆ 200 ತಟ್ಟೆ, 200 ಲೋಟ ದಾನವಾಗಿ ನೀಡಿದರು. ಎಸ್.ಎಂ.ರುದ್ರಮುನಿ ಹಾಗೂ ವಿಜಯಾ ದೇಶಪಾಂಡೆ ರವರಿಗೆ ಶಾಲಾಡಳಿತ ಹಾಗೂ ಹಳೆ ವಿದ್ಯಾರ್ಥಿಗಳಿಂದ ಬಿಳ್ಕೋಡಲಾಯಿತು. ನಗರಸಭೆ ಸದಸ್ಯ ಕೆ.ಗೌಸ್, ಶ್ರೀಕಂಠ,ತಾರಿಹಳ್ಳಿ ಪ್ರಕಾಶ ಮುಖ್ಯ ಶಿಕ್ಷಕ ಜಿ.ಎಸ್.ನಾಗರಾಜ್ ರಾವ್, ನಿವೃತ್ತ ಮುಖ್ಯ ಶಿಕ್ಷಕ ಜೆ.ಭೀಮಪ್ಪ, ಜಿ.ತಿಮ್ಮರೆಡ್ಡಿ,ಪಾಪಣ್ಣ ಹಾಗೂ ಜಂಬಯ್ಯ ನಾಯಕ, ಪೂಜಾರಿ ವೆಂಕೋಬ ನಾಯಕ ಕಟಗಿ ಜಂಬಯ್ಯ ನಾಯಕ ವಿಜಯ ಕುಮಾರ್ ಕಾಶಿ ವಿಶ್ವನಾಧ ಅರಿವಿಂದ ಡಾ.ಗುಜ್ಜಲ್ ಹುಲುಗಪ್ಪ ಗಂಗಾಧರ ಇತರರಿದ್ದರು.