221

ಬಳ್ಳಾರಿ /ಹೊಸಪೇಟೆ ತಾಲೂಕಿನ ರಾಮಸಾಗರ ಗ್ರಾಮದ ಪಂಪಾ ವಿದ್ಯಾಪೀಠದಬಳಿ ಬೇಲಿ ತಂತಿಗೆ ಸಿಕ್ಕಿ ಹಾಕಿ ಕೊಂಡ ಕರಡಿ ಮರಿಯನ್ನುರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ಘಟನೆ ಶುಕ್ರವಾರ ಬೆಳಗಿನಜಾವ ನಡೆದಿದೆ.

ಕರಡಿ ಧಾಮದ ಕಾಡಿನಿಂದ ಕಂಪ್ಲಿ ಸಮೀಪದ ಪಂಪಾವಿದ್ಯಾಪೀಠ ಬಳಿ ಹಾಕಿದ್ದ ತಂತಿ ಬೇಲಿಗೆ ಕರಡಿ ಮರಿ ಸಿಕ್ಕಿಹಾಕಿಕೊಂಡು ಚಿರಾಡಿದ್ದು, ತಂತಿ ಬೇಲಿಯಲ್ಲಿಸಿಕ್ಕಿಹಾಕಿಕೊಂಡು ಕಾರಣ ಕರಡಿ ಮರಿ ಬಿಡಿಸಿ ಕೊಳ್ಳುವುದಕ್ಕೆಆಗದೆ ಕಿರುಚಾಡುತ್ತಿದ್ದನ್ನು ಸಮೀಪದ ಮುರಾರ್ಜಿ ವಸತಿನಿಲಯದ ವಾರ್ಡನ್ ಹಾಗೂ ಶಾಲೆಯ ಸಿಬ್ಬಂದಿಗಳು ಕರಡಿಸಿಕ್ಕಿ ಹಾಕಿಕೊಂಡಿರುವುದನ್ನು ನೋಡಿ ತಕ್ಷಣವೇ ಅರಣ್ಯಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದಕರಡಿ ಮರಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಕರಡಿ ಮರಿಯು ಬದಿಕಿತು ಜೀವ ಎಂದು ಕಾಡಿನ ಕಡೆಗೆಓಡಿ ಹೋಯಿತು.