ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರು..

444

ಬಳ್ಳಾರಿ /ಹೊಸಪೇಟೆ.ಸ್ಥಳೀಯ ಹೊಸಪೇಟೆ ವಕೀಲರ ಸಂಘಕ್ಕೆ ಜರುಗಿದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಉಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಡಿ.ವೀರನಗೌಡ, ಉಪಾಧ್ಯಕ್ಷರಾಗಿ ಜಿ.ಎಂ.ಬಾಷ, ಜಂಟಿ ಕಾರ್ಯದರ್ಶಿಯಾಗಿ ಕ್ಯಾರ್ ವೆಂಕಟೇಶ್, ಖಜಾಂಚಿಯಾಗಿ ಕೆ.ಚೆನ್ನಬಸಪ್ಪ ಆಯ್ಕೆಯಾಗಿದ್ದಾರೆ.

ಅಲ್ಲದೆ ಹೊಸಪೇಟೆ ವಕೀಲರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಹೆಚ್.ಮಹೇಶ್, ಡಿ.ಪ್ರಕಾಶ್, ಎಸ್.ನಾಗರಾಜ್, ಎಸ್.ಎಂ.ಸತೀಶ್, ಹೆಚ್.ವೆಂಕಟೇಶಲು, ಎ.ಮರಿಯಪ್ಪ, ಎಂ.ನೀಲಕಂಠ, ಬಿ.ಹುಲೆಪ್ಪ, ಟಿ.ಹೆಚ್.ಎಂ.ಚಂದ್ರಶೇಖರ್, ಪಿ.ನಾಗಭೂಷಣ, ಹೆಚ್.ವಿಶ್ವನಾಥ, ಕೆ.ಯೂಸೂಫ್, ಎಸ್.ಶ್ರೀನಿವಾಸ ಹಾಗೂ ಮಹಿಳಾ ಸದಸ್ಯರಾಗಿ ಈ.ಪುಷ್ಪಲತಾ, ಬಿ.ಜಿ.ರಾಧಾದೇವಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ/ಉಪಾಧ್ಯಕ್ಷ/ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉಳಿದ ಸ್ಥಾನಗಳಿಗೆ ಗುರುವಾರ ಚುನಾವಣೆ ಜರುಗಿತ್ತು. ಮತಗಳ ಏಣಿಕೆ ಗುರುವಾರ ರಾತ್ರಿ ವರೆಗೆ ಜರುಗಿತು. ಚುನಾವಣಾಧಿಕಾರಿ ಎಂ.ಮಹಮದ್ ರಫಿ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.
ಮತಗಳ ವಿವರ
ಹೊಸಪೇಟೆ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಜರುಗಿದ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.
ಅಧ್ಯಕ್ಷ ಸ್ಥಾನ:- ಹೆಚ್.ಉಮೇಶ್(98), ಕೆ.ವಿ.ಬಸವರಾಜ(87), ಟಿ.ಮಲ್ಲಪ್ಪ(82), ಚಂದ್ರಶೇಖರ್ ಪಿ.ಯಲಗೋಡು(33), ಕಳಗದ ವೆಂಕಟೇಶ್(03) ಮತಗಳು ಪಡೆದಿದ್ದಾರೆ. ಉಪಾಧ್ಯಕ್ಷ ಸ್ಥಾನ:- ಜಿ.ಎಂ.ಬಾಷ(112), ಹೆಚ್.ಪಿ.ಕಲ್ಲಂ ಭಟ್(92), ಸಿ.ಶಿವಮೂರ್ತಿ(78), ಪಿ.ಮಧುಸೂಧನ ಶೆಟ್ಟಿ(21) ಮತಗಳು, ಪ್ರಧಾನ ಕಾರ್ಯದರ್ಶಿ:- ಡಿ.ವೀರನಗೌಡ(156), ಜಿ.ಸತೀಶ್(146) ಶ್ರೀಕೃಷ್ಣದೇವರಾಯಲು(1) ಮತಗಳು, ಜಂಟಿ ಕಾರ್ಯದರ್ಶಿ:- ಕ್ಯಾರ್ ವೆಂಕಟೇಶ್(110), ಎ.ಮಂಜುನಾಥ(107), ರಫೀಕ್ ಜಬೀನ್(86) ಮತಗಳು, ಖಜಾಂಚಿ:- ಕೆ.ಚೆನ್ನಬಸಪ್ಪ(179), ಸಿ.ಎಂ.ಶಿವಪ್ರಕಾಶ್(124) ಮತಗಳು ಪಡೆದಿದ್ದಾರೆ.
ಒಟ್ಟು 345 ಮತಗಳ ಪೈಕಿ, 304 ಮತಗಳು ಚಲಾವಣೆಗೊಂಡಿದ್ದು. ಅದರಲ್ಲಿ 1 ಮತ ತಿರಸ್ಕೃತಗೊಂಡಿದೆ.