ವಿದ್ಯಾರ್ಥಿಗಳು ನಾಪತ್ತೆ..?

582

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಹೊರವಲಯದ ಕಾವಲು ಗಾನಹಳ್ಳಿಯ ಜೈನ್ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳು ಶನಿವಾರ ಬೆಳಿಗ್ಗೆಯಿಂದ ಕಾಣೆಯಾಗಿದ್ದು ವಿದ್ಯಾರ್ಥಿ ಗಳ ನಾಪತ್ತೆ ಪ್ರಕರಣ ಸಂಚಲನ ಮೂಡಿಸಿದೆ.
ನಾಪತ್ತೆಯಾದ ಹುಡುಗರನ್ನು ನಗರದ ಪ್ರಭಾಕರ ಬಡಾವಣೆಯ ರವಿತೇಜಸ್ಕಂದ, ಕಾಳಪ್ಪ ಬಡಾವಣೆಯ ಪವನ್ ತೇಜ್ ಮತ್ತು ಕೋಲಾರದ ಶ್ರೀನಿವಾಸ ಪುರ ತಾಲ್ಲೂಕಿನ ಗೌನಪಲ್ಲಿ ಸಮೀಪದ ಹೊಸಹುಡ್ಯ ಗ್ರಾಮದ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

ಶನಿವಾರ ಬಕ್ರೀದ್ ಗೆ ರಜೆ ಇರುವುದರಿಂದ ಪ್ರಾಜೆಕ್ಟ್ ವರ್ಕ್ ಮಾಡಿಕೊಂಡು ಬರುವದಾಗಿ ಪವನ್ ತೇಜ್ ತನ್ನ ಸ್ನೇಹಿತನಾದ ರವಿತೇಜಸ್ಕಂದನ ಮನೆ ಬಳಿ ಬಂದಿದ್ದು ,ನಂತರ ಇಬ್ಬರು ಪ್ರಾಜೆಕ್ಟ್ ವರ್ಕ್ ಪ್ರಿಂಟ್ ತಗೊಂಡು ಬರಲು ನಗರದ ಎನ್.ಅರ್ .ಬಡಾವಣೆ ನಗರಸಭೆಯ ಪಕ್ಕದಲ್ಲಿರುವ ಶ್ರೇಯ ಕಂಪ್ಯೂಟರ್ ಗೆ ಹೋಗುದಾಗಿ ಹೇಳಿ ಸೈಕಲ್ ನಲ್ಲಿ ಹೋದವರು ಮತ್ತೆ ಮನೆಗೆ ವಾಪಸ್ಸಾಗಿಲ್ಲ ಎಂದು ಪೋಷಕರು
ನಗರ ಠಾಣೆಗೆ ನೀಡಿದ್ದಾರೆ.

ಕಾಣೆಯಾದ ಮತ್ತೋರ್ವ ಬಾಲಕ ಶ್ರೀಕಾಂತ್ ರವರ ತಂದೆಯೂ ಮಗನ ಸ್ನೇಹಿತರ ಪೋಷಕರಿಗೂ ಕರೆ ಮಾಡಿ ಕಾಣೆಯಾಗಿರುವ ವಿಷಯ ಮಟ್ಟಿಸಿ, ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ ಠಾಣೆ ಗೆ ದೂರು ನೀಡಿದ್ದಾರೆ.

ಇದು ಚಿಂತಾಮಣಿ ನಗರ ಪೊಲೀಸರು ಠಾಣೆ ಯಲ್ಲಿ ಪ್ರಕರಣ ದಾಖಲೆಯಾಗಿದೆ.

 

ಬಾಲಕರ ಪತ್ತೆಗೆ ಜಾಲ ಬೀಸಿರುವ ನಗರದ ಠಾಣೆ ಪೊಲೀಸರು. ಇವರ ಸುಳಿವುಸಿಕ್ಕರೆ ನಗರಠಾಣೆ ದೂರವಾಣಿ ಸಂಖ್ಯೆ: 08154 252140 ಅಥವಾ ಪೊಲೀಸ್ ಇನ್ಸ್‌ಪೆಕ್ಟರ್ 9480802553,9071004139 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.