ಮೇಲ್ವಿಚಾರಕರನ್ನು ವರ್ಗಾವಣೆ ಮಾಡಿ ಎಂದು ಪ್ರತಿಭಟನೆ…

283

ಕಲಬುರ್ಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಹೊಸೂರ ಗ್ರಾಮದ ವಸತಿ ನಿಲಯದಲ್ಲಿ ಸುಮಾರು ಐವತ್ತುಕ್ಕು ಹೆಚ್ಚು ಮಕ್ಕಳು ಇದ್ದು ಈ ವಸತಿ ನಿಲಯಕ್ಕೆ ಲಕ್ಷಾಂತರ ರೂಪಾಯಿ ಅನುದಾನ ಇದ್ದರು ವಸತಿ ನಿಲಯದ ಮೇಲ್ವಿಚಾರಕರ ನಿರ್ಲಕ್ಷ್ಯತೆ ಹಾಗೂ ಅವರ ವರ್ತನೆ ಖಂಡಿಸಿ ಪ್ರತಿಭಟನೆ ಮಾಡಲಾಯಿತು.

ಮಕ್ಕಳಿಗೆ ಉತ್ತಮವಾದ ಊಟ ನೀಡದ ಕಾರಣ ಜೊತೆಗೆ ವಸತಿ ನಿಲಯದಲ್ಲಿ ಕಟ್ಟಡ ಸಂಪೂರ್ಣವಾಗಿ ಹಾಳಾಗಿದೆ. ಶುದ್ದ ಕುಡಿಯುವ ನೀರಿನ ಘಟಕ ಇದ್ದರು ಕೇವಲ ಹೆಸರಿಗೆ ಸಿಮಿತವಾಗಿದೆ.ವಿದ್ಯುತ ದೀಪಗಳಂತು ಇಲ್ಲವೆ ಇಲ್ಲ. ಸುಮಾರು ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ ಆದರೆ ಇದನ್ನು ಬಳಸಲು ಸಾಧ್ಯವಿಲ್ಲಾದಂತೆ ಆಗಿದೆ ಏಕೆಂದರೆ ನೀರಿನ ಸಮಸ್ಯೆ ಇದೆ ಜೊತೆಗೆ ಸುಮಾರು ಎರಡು ಬಾರಿ ಮಕ್ಕಳಿಗೆ ಹಾವು ಕಚ್ಚಿದ್ದು ಮತ್ತು ಬಂದು ಬಾರಿ ಚೇಳು ಕಚ್ಚಿದ್ದು ತಿಳಿದು ಬಂದಿದೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಹಾಗೂ ಮಕ್ಕಳು ಸೇರಿಕೊಂಡು ಪ್ರತಿಭಟನೆ ನಡೆಸಿದ್ದರು. ನಂತರ ತಾಲ್ಲೂಕು ಅಧಿಕಾರಿ ಎಸ್ ಗಿಣ್ಯಿ ಭೇಟಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಪರಿಶೀಲನೆ ನಡೆಸಿ ಸೂಕ್ತವಾದ ಕ್ರಮ ಜರುಗಿಸುತ್ತೆವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೊಂಡಿಬಾ ಹೊನಮನೆ.ಶರಣಪ್ಪಾ ಕರಜಗಿ. ಕಾಶಿನಾಧ ಬ್ಯಾಗಳ್ಳಿ.ಸೈಪನ ನಾದ. ನಿಂಗರಾಜ ಗೌಡಗಾಂವ. ನತೀಶ ಅಂದೇವಾಡಿ.ಅಶೋಕ ಬರಗಾತಿ.ಗಂಗಾಧರ ಹಂಜಗಿ.ಲಕ್ಷೀಕಾಂತ ಚಿನ್ಮಳ್ಳಿ.ಮಹಾಂತೇಶ ಅಂದೇವಾಡ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.