ನಗರಸಭೆ ಅಧ್ಯಕ್ಷೆ ಯಾಗಿ ನಾಗಲಕ್ಷ್ಮಮ್ಮ ಆಯ್ಕೆ…

442

ಬಳ್ಳಾರಿ/ಹೊಸಪೇಟೆ:ಹೊಸಪೇಟೆ ನಗರಸಭೆ ಅಧ್ಯಕ್ಷೆ ಯಾಗಿ 3 ನೇ ವಾರ್ಡಿನ ನಾಗಲಕ್ಷ್ಮಮ್ಮ ಅವರೋಧವಾಗಿ ಆಯ್ಕೆ ಆಗಿದ್ದಾರೆ.

ಇಂದು ನಡೆದ ಅಧ್ಯಕ್ಷರ ಚುನಾವಣೆಗೆ ನಾಗಲಕ್ಷ್ಮಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಸಹಾಯಕ ಆಯುಕ್ತರೂ ಆಗಿರುವ ಸಹಾಯಕ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನಾಗಲಕ್ಷ್ಮಮ್ಮ ಅವರ ಆಯ್ಕೆಯನ್ನು ವಿದ್ಯುಕ್ತವಾಗಿ ಘೋಷಣೆ ಮಾಡಿದರು.

ಈಮಧ್ಯೆ ಕಾಂಗ್ರೆಸ್ ಪಕ್ಷದ ಸದಸ್ಯ 19 ನೇ ವಾರ್ಡಿನ ಗೌಡ್ರು ರಾಮಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿ, ಕೊನೆ ಘಳಿಗೆಯಲ್ಲಿ ನಮ್ಮನ್ನು ನಗರಸಭೆ ಆವರಣಕ್ಕೆ ಕರೆದುಕೊಂಡು ಬಂದ್ರು. ಈಗ ಏಕಾಏಕಿ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದ್ರು ಅಂತ ಹೇಳಿದ್ರು.

ಆದ್ರೂ, ಸಹಾಯಕ ಚುನಾವಣಾಧಿಕಾರಿಗಳು ನಾಗಲಕ್ಷ್ಮಮ್ಮ ನ ಹೆಸರು ಘೋಷಿಸಿ, ಅಧ್ಯಕ್ಷ ಸ್ಥಳ ದಲ್ಲಿ ನಾಗಲಕ್ಷ್ಮಮ್ಮ ನವರನ್ನು ಪದಗ್ರಹಣಕ್ಕೆ ಅನುವು ಮಾಡಿಕೊಟ್ಟರು.

ಈವೇಳೆ ಶಾಸಕ ಆನಂದ್ ಸಿಂಗ್, ಪೌರಾಯುಕ್ತ ರಮೇಶ್ ಕುಲಕರ್ಣಿ ಸೇರಿದಂತೆ ನಗರಸಭೆಯ ಎಲ್ಲ ಸದಸ್ಯರು ಹಾಜರಿದ್ದರು.

*ಅಸಮಾಧಾನಕ್ಕೆ ತೆರೆ*

ನಾಗಲಕ್ಷ್ಮಮ್ಮ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಲ್ಲಿ ಭುಗಿಲೆದ್ದ ಅಸಮಾಧಾನಕ್ಕೆ ತೆರೆ ಬಿದ್ದಿತು. ಇಷ್ಟಕ್ಕೂ ಶಾಸಕ ಆನಂದ್ ಸಿಂಗ್ ನೇತೃತ್ವದಲ್ಲಿ ಈ ಹಿಂದಿನ ಒಪ್ಪಂದದಂತೆ 10 ತಿಂಗಳ ಅಧಿಕಾರ ಪೂರೈಸಿದ ಎನ್.ಅಬ್ದುಲ್ ಕಧೀರ್ ತೀರಾ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ 27ನೇ ವಾರ್ಡ್ ಸದಸ್ಯ ಟಿ.ಚಿದಾನಂದ, 19ನೇ ವಾರ್ಡಿನ ಗೌಡ್ರು ರಾಮಣ್ಣ ಮತ್ತು 3 ನೇ ವಾರ್ಡಿನ ನಾಗಲಕ್ಷ್ಮಮ್ಮ ಅವರ ನಡುವೆ ತ್ರಿಕೋಣ ಸ್ಪರ್ಧೆ ಇತ್ತು. ಕೊನೆಯಲ್ಲಿ ಸಿನೀಮೀಯ ರೀತಿಯಲ್ಲಿ ನಾಗಲಕ್ಷ್ಮಮ್ಮ ನಿಗೆ ಅದೃಷ್ಟ ಖುಲಾಯಿಸಿರುವುದು ವಿಶೇಷ.