ವೈನ್ ಸ್ಟೋರ್ ಮಾಲೀಕನನ್ನು ಅಡ್ಡಗಟ್ಟಿ ಡರೋಡೆ:

209

ಬೆಂಗಳೂರು/ ದೊಡ್ಡಬಳ್ಳಾಪುರ: ನಗರದ ಗಂಗಾಧರಪುರದಲ್ಲಿ ವೈನ್ಸ್ ಸ್ಟೋರ್ ಮಾಲಿಕ ನವೀನ್ ಕುಮಾರ್ ಅವರನ್ನು ಅಡ್ಡಗಟ್ಟಿದ ನಾಲ್ವರು ಆಗಂತುಕರು ರೂ.1,30,000 ನಗದು ದೋಚಿರುವ ಪ್ರಕರಣ ನೆನ್ನೆ ರಾತ್ರಿ ನಡೆದಿದೆ.

ನಗರದ ಗಂಗಾಧರಪುರದ ನಿವಾಸಿ ನವೀನ್ ಕುಮಾರ್ ಅವರು ಎಂದಿನಂತೆ ತಮ್ಮ ಮದ್ಯದ ಅಂಗಡಿ ಮುಚ್ಚಿ ಸುಮಾರು ರಾತ್ರಿ ೧೦-೩೦ ರ ಸಮಯದಲ್ಲಿ ಕ್ಯಾಷ್ ತೆಗೆದುಕೊಂಡು ಗಂಗಾಧರಪುರದ ಮನೆಗೆ ಬೈಕ್ ನಲ್ಲಿ ಹಿಂತಿರುಗಿದ್ದಾರೆ.
ಅವರನ್ನು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿ ಬಂದ ನಾಲ್ಕು ಜನ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಕಣ್ಣಿಗೆ ಪೆಪ್ಪರ್ ಸ್ಫ್ರೆ ಮಾಡಿ,ಲಾಂಗ್ ತೋರಿಸಿ ಅವರ ಬಳಿಇದ್ದ ರೂ.1,30,000 ರೂಗಳನ್ನು ದೋಚಿ ಪರಾರಿಯಾಗಿದ್ದಾರೆ,

ಇಂದು ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಎಸ್ಪಿ ಅಮೀತ್ ಸಿಂಗ್ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂದಿಸುವಂತೆ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ರಸ್ತೆಯ ತಿರುವಿನಲ್ಲಿರುವ ಟೈಲ್ಸ್ ಅಂಗಡಿಯ ಮುಂದಿನ ಸಿಸಿ ಕ್ಯಾಮರಾದ ಫೂಟೇಜ್ ಪರಿಶೀಲನೆಗೆ ಪಡೆದಿದ್ದಾರೆ.