ಕಾರ್ಮಿಕರನ್ನು ಖಾಯಂ ಗೊಳಿಸಲು ಒತ್ತಾಯ..

208

ಚಿಕ್ಕಬಳ್ಳಾಪುರ:ಕೆಪಿಟಿಸಿಎಲ್ ನ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಲು ಒತ್ತಾಯ ..

ಕೆಪಿಟಿಸಿಎಲ್ ನ ಹೊರಗುತ್ತಿಗೆ ಕಾರ್ಮಿಕರನ್ನ ಖಾಯಂ ಗೊಳಿಸಲು ಕೆಪಿಟಿಸಿಎಲ್ ನ ಹೊರಗುತ್ತಿಗೆ ಕಾರ್ಮಿಕರ ಫೆಡರೇಷನ್ ನ ರಾಜ್ಯ ಕಾರ್ಯದರ್ಶಿ ರವಿ ಒತ್ತಾಯಿಸಿದ್ದಾರೆ..
ಇಂದನ ಇಲಾಖೆಯ ಕೆಪಿಟಿಸಿಎಲ್ ನ ಹೊರಗುತ್ತಿಗೆ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸತ್ತಿದ್ದಾರೆ ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಇವರಿಗೆ ಕನಿಷ್ಟ ಮಾಸಿಕ ವೇತನ. ರೂ 21000.ನೀಡಬೇಕು. ಎಲ್ಲಾ ವಿದ್ಯುತ್ ಗುತ್ತಿಗೆ ಕಾರ್ಮಿಕರ ಪಿಎಫ್ ಮತ್ತು ಇ ಎಸ್ ಐ ಹಾಗೂ ಸಂಬಳ ಚೀಟಿ ಗುರುತಿನಚೀಟಿ ಮೂಲ ಮಾಲೀಕರ ಸಹಿಯೊಂದಿಗೆ ನೀಡಬೇಕು.ವಿದ್ಯುತ್ ಅಪಘಾತಗಳಲ್ಲಿ ನಿಧನರಾದವರಿಗೆ ಮತ್ತು ಅಂಗವಿಕಲರಾದವರಿಗೆ ಸಂಪೂರ್ಣ ಪರಿಹಾರವನ್ನು ಮತ್ತು ಅವರ ಕುಟುಂಬದ ಸದಸ್ಯರಿಗೆ ಕೆಲಸ ಕೊಡಬೇಕು ಎಂದು ಒತ್ತಾಯಿಸಿದರು..ವೇದಿಕೆಯಲ್ಲಿ ಲಕ್ಷೀದೇವಮ್ಮ..ಲಕ್ಷ್ಮೀಪತಿ .ಮಂಜುನಾಥ
ಗಜೇಂದ್ರ ಇದ್ದರು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ