ಜೆಡಿಎಸ್ ಬೆಂ.ಗ್ರಾ,ಜಿಲ್ಲಾ ವೀಕ್ಷಕರಾಗಿ.ಡಾ.ವಿಜಯ್ ಕುಮಾರ್

201

ತುಮಕೂರು/ ಚಿಕ್ಕನಾಯಕನಹಳ್ಳಿ: ಜೆ ಪಿ ಭವನದಲ್ಲಿ ನಡೆದ ರಾಜ್ಯ ಬೂತ್ ಸಮಿತಿ ಸಭೆಯಲ್ಲಿ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಸಮ್ಮುಖದಲ್ಲಿ ತಾಲ್ಲೂಕು ಅಧ್ಯಕ್ಷರಾದ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ವೀಕ್ಷಕರಾದ ಡಾ.ವಿಜಯ್ ಕುಮಾರ್ ರವರಿಗೆ ಐಡಿ ಕಾರ್ಡನ್ನು ರಾಜ್ಯಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ರವರು ನೀಡಿದರು. ರಾಜ್ಯ ಬೂತ್ ಸಮಿತಿ ಅಧ್ಯಕ್ಷರಾದ ಹಾಗೂ ಶಾಸಕರಾದ ಸಿ.ಬಿ. ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬೂತ್ ಸಮಿತಿ ಸಂಚಾಲಕರಾದ ಎನ್. ಅಪ್ಪಾಜಿಗೌಡರು, ವಿಧಾನ ಪರಿಷತ್ ಸದಸ್ಯರು ಬಿಎಂಎಲ್.ಕಾಂತರಾಜು ರವರು ಉಪಸ್ಥಿತರಿದರು.