ರಸ್ತೆಯಲ್ಲಿ ಎಲ್ಎಲ್ಸಿ ಕಾಲುವೆ ನೀರು ಪೋಲು

410

ಬಳ್ಳಾರಿ /ಹೊಸಪೇಟೆ: ತಾಲೂಕಿನ ಕಮಲಾಪುರ ದಲ್ಲಿ ಎಲ್ ಎಲ್ ಸಿ ಕಾಲುವೆಗೆ ತುಂಗಭದ್ರಾ ಜಲಾಶಯ ದಿಂದ ಮಿತಿಮೀರಿ ಹೆಚ್ಚು ನೀರು ಹರಿದು ಬಂದಿದ್ದು, ಸೀತರಾಂ ತಾಂಡಕ್ಕೆ ತೆರಳುವ ರಸ್ತೆಯಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿದ್ದು

ಇನ್ನು ತುಂಗಭದ್ರಾ ಜಲಾಶಯ ಭರ್ತಿಯಾಗಿಲ್ಲ. ಆಂದ್ರಕ್ಕೆ ಬಿಡುವ ನೀರು ಅಳತೆ ಮೀರಿದೆ. ಇದರಿಂದ ಕಾಲುವೆ ನೀರು ಪೋಲಾಗಿದೆ. ಕುಡಿಯಲು ಹಾಗೂ ಕೃಷಿಗೆ ಸರಿಯಾಗಿ ನೀರು ಕೊಡುವುದಿಲ್ಲ. ಆದರೆ ಬೇಕಾಬಿಟ್ಟಿಯಾಗಿ ಕಾಲುವೆಗೆ ಟಿಬಿ ಬೋರ್ಡ್‌ ನೀರರಿಸುತ್ತದೆ. ಮೊದಲೆ ಜಲಾಶಯದಲ್ಲಿ ನೀರು ಕಡಿಮೆ ಇದೆ. ಈ ಸಮಯದಲ್ಲಿ ವ್ಯವಸ್ಥಿತವಾಗಿ ನೀರು ಬಿಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಹೊಸಪೇಟೆ ರೈತ ಸಂಘದ ಅಧ್ಯಕ್ಷರಾದ ಗೋಸಲ ಭರಮಪ್ಪ ತಿಳಿಸಿದ್ದಾರೆ