ಬಾವಿಯಲ್ಲಿ ನವಜಾತ ಶಿಶು ಪತ್ತೆ

218

ಚಾಮರಾಜನಗರ/ಹನೂರು: ಪಟ್ಟಣದ ಬಾವಿಯೊಂದರಲ್ಲಿ ನವಜಾತ ಶಿಶುವಿನ ಶವವೊಂದು ಪತ್ತೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೊರವಲಯದಲ್ಲಿರುವ ತಿಪ್ಪರಾಯ ಎಂಬುವರಿಗೆ ಸೇರಿದ ಬಾವಿಯಲ್ಲಿ ನವಜಾತ ಗಂಡು ಮಗುವಿನ ಶಿಶು ಪತ್ತೆಯಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಬಾವಿಗೆ ಮಗುವನ್ನು ಎಸೆದಿರಬಹುದೆನ್ನಲಾಗುತ್ತಿದೆ.
ಅನೈತಿಕ ಸಂಬಂಧಕ್ಕೆ ಈ ಮಗು ಜನಿಸಿರಬಹುದು. ಆ ಕಾರಣಕ್ಕೆ ಬಾವಿಗೆ ಶಿಶು ಎಸೆದಿರಬಹುದು ಎಂದು ಶಂಕಿಸಲಾಗಿದೆ. ಹನೂರು ಪೊಲೀಸರು ಮಗುವನ್ನು ಬಾವಿಯಿಂದ ಹೊರ ತೆಗೆದಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ. ಮಗು ಯಾರಿಗೆ ಸೇರಿದ್ದೆಂದು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.