ಶ್ರೀಗಳಿಂದ ಕೆರೆಗಳಿಗೆ ಬಾಗಿನ ಸಮರ್ಪಣೆ

207

ಮಂಡ್ಯ/ಮಳವಳ್ಳಿ: ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆ ವತಿಯಿಂದ ಮುಡುಕುತೊರೆ ಏತ ನೀರಾವರಿಯಿಂದ ತುಂಬುತ್ತಿರುವ ಮಳವಳ್ಳಿ ತಾಲ್ಲೂಕಿನ ಬಿಜಿಪುರ. ಸರಗೂರು . ಕೊಡುಗಹಳ್ಳಿ ಕೆರೆಗಳಿಗೆ ಸುತ್ತೂರು ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿ, ಹಾಗೂ ಶಾಸಕ ಪಿ.ಎಂ ನರೇಂದ್ರ ಸ್ವಾಮಿ ರವರಿಂದ ಬಾಗಿನ ಸಮರ್ಪಣೆ ಮಾಡಿದರು. ನಂತರ ಮಳವಳ್ಳಿ ತಾಲ್ಲೂಕಿನ ಬಿಜಿಪುರ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ವನ್ನು ಶಾಸಕ ಪಿ ಎಂ ನರೇಂದ್ರ ಸ್ವಾಮಿ ಉದ್ಘಾಟಿಸಿ ಮಾತನಾಡಿ. ಬರಗಾಲವಿದ್ದರೂ ಈ ಭಾಗ ರೈತರಿಗೆ ಅನುಕೂಲವಾಗಲೆಂದು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ರೈತರಿಗೆ ಮುಂದಿನದಿನಗಳಲ್ಲಿ ಹಸಿರುಮಯವಾಗಿ ಜಮೀನು ಮಾಡುವುದಾಗಿ ತಿಳಿಸಿದ ಅವರು ಯಾರು ಜಮೀನನ್ನು ಮಾರಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ. ಹಿಂದೆ ಗ್ರಾಮವನ್ನು ಸ್ವತಃ ಗ್ರಾಮಸ್ಥರು ಒಂದು ಸ್ವಚ್ಚಗೊಳಿಸಿಕೊಳ್ಳುತ್ತಿದ್ದರು ಆದರೆ ಕಾಲ ಬದಲಾಗಿದ್ದು. ತಾತ್ಸರ ಮನೋಭಾವ ಮೂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ಹೆಚ್ಚಾಗಿ ಬೋರ್ ವೇಲ್ ನಲ್ಲಿ ನೀರು ಶೇಖರಣೆ ಯಾಗುತ್ತದೆ ಅದಕ್ಕಾಗಿ ಕೆರೆಯ ಹೂಳೆತ್ತುವ ಕೆಲಸವನ್ನು ಮಾಡಬೇಕು ಎಂದರು . ಕಾರ್ಯಕ್ರಮ ದಲ್ಲಿ ತಾ.ಪಂ ಅಧ್ಯಕ್ಷ ಆರ್.ಎನ್ ವಿಶ್ವಾಸ್, ಬಿಜಿಪುರ ಮಂಟೇಸ್ವಾಮಿ ಮಠದ ಕಿರಿಯ ಸ್ವಾಮಿಜೀ ಜ್ಞಾನೇಂದ್ರರಾಜೇ ಅರಸು. ಹೊರಮಠದ ಶ್ರೀಗಳು, ತಾ.ಪಂ ಉಪಾಧ್ಯಕ್ಷ ಮಾಧು, ಜಿ.ಪಂ ವಿರೋಧಪಕ್ಷದ ನಾಯಕ ಹನುಮಂತು.ಸುಜಾತಸುಂದ್ರಪ್ಪ, ಜಯಕಾಂತ,ಸುಜಾತಪುಟ್ಟು .ಎಪಿಎಂಸಿ ಅಧ್ಯಕ್ಷ ಅಂಬರೀಶ್, ಅಮೃತಕಂಠೇಶ್ ಸೇರಿದಂತೆ ಮತ್ತಿತರರು ಇದ್ದರು