ಬಿಜೆಪಿ ಕಾರ್ಯಕರ್ತರ ಸಮಾವೇಶ,ಸೇರ್ಪಡೆ ಕಾರ್ಯಕ್ರಮ

260

ಬೆಂಗಳೂರು/ಮಹದೇವಪುರ-: ಎಡ-ಬಲ ಪಂಥೀಯರಿಗೂ ಕೂಡಾ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಕಿಡಿಕಾರಿದರು.

ಮಹದೇವಪುರ ಕ್ಷೇತ್ರದ ಕಿತ್ತಗನೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಹಾಗೂ ಅನ್ಯ ಪಕ್ಷದ ಮುಖಂಡರುಗಳ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಬಿಜೆಪಿ ಕಾರ್ಯಕರ್ತರ ಹತ್ಯೆ ಮತ್ತು ಗೌರಿಲಂಕೇಶ್ರ ಹತ್ಯೆಗಳು ನಡೆದಿರುವುದು ಸಾಕ್ಷಿಯಾಗಿದ್ದು ಇದರಲ್ಲಿ ಬಲಪಂಥೀಯ ಮತ್ತು ಎಡಪಂಥೀಯರಿಬ್ಬರಿಗೂ ರಕ್ಷಣೆ ಇಲ್ಲದಂತಾಗಿದೆ. ಆರ್ಎಸ್ಎಸ್ ಕಾರ್ಯಕರ್ತರ ಕೊಲೆಗಡುಕರನ್ನು ಬಂಧಿಸಲು ವಿಫಲವಾಗಿರುವ ಇವರು, 2ವರ್ಷಗಳ ಹಿಂದಿನ ಕಲ್ಬುಗರ್ಿ ಹಂತಕರನ್ನು ಹಿಡಿಲು ಸಾಧ್ಯವಾಗಿಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಭಂದಿಸಿದಂತೆ ಅವರ ಮೊಬೈಲ್ನಲ್ಲಿರುವ ಸಾಕ್ಷ್ಯಗಳನ್ನು ನಾಶಗೊಳಿಸಿರುವ ಅಂಶಗಳು ಬೆಳಕಿಗೆ ಬಂದಿದ್ದು ಪ್ರಕರಣವನ್ನು ಹಾದಿ ತಪ್ಪಿಸುವ ಕೆಲಸ ನಡೆದಿದೆ. ಇನ್ನೂ ಪ್ರಾಮಾಣಿಕ ಅಧಿಕಾರಿಗಳು ರಾಜ್ಯದಲ್ಲಿ ಕೆಲಸ ಮಾಡಲಾಗುತ್ತಿಲ್ಲ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.
ಕೇಂದ್ರ ಸಕರ್ಾರದ ಯೋಜನೆಗಳು ಮತ್ತು ಆಡಳಿತದ ವೈಖರಿಯನ್ನು ಗಮನಿಸಿ ಅನ್ಯಪಕ್ಷಗಳವರು ಬಿಜೆಪಿ ಪಕ್ಷದತ್ತ ಆಕಷರ್ಿತರಾಗುತ್ತಿದ್ದಾರೆ. ಅಂತೇಯೇ ಸಾಮಾನ್ಯಕಾರ್ಯಕರ್ತನನ್ನು ಕೂಡಾ ಗುರಿತಿಸಿ ಅವರಿಗೆ ಉನ್ನತ ಸ್ಥಾನಮಾನ ನೀಡುವುದು ಬಿಜೆಪಿ ಪಕ್ಷ ಮಾತ್ರ ಎಂದು ಅವರು ಹೇಳಿದರು.
ಯೂತ್ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿ, ಮಹದೇವಪುರ ಕ್ಷೇತ್ರದಲ್ಲಿ ಅರವಿಂದಲಿಂಬಾವಳಿಯವರು ಮಾಡಿರುವ ಅಭಿವೃದ್ದಿಯನ್ನು ಕಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಮುಂದಿನ ಚುನಾವಣೆಯಲ್ಲಿ ಅರವಿಂದಲಿಂಬಾವಳಿಯನ್ನು ಬಹುಮತದಿಂದ ಗೆಲ್ಲಿಸುವುದು ನನ್ನ ಗುರಿ ಎಂದರು.ಅಲ್ಲದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ವನಾಶ ವಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಜಿಲ್ಲಾಧ್ಯಕ್ಷ ಮುನಿರಾಜು,ಕ್ಷೇತ್ರಾಧ್ಯಕ್ಷ ನಟರಾಜ್, ರಾಜಾರೆಡ್ಡಿ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಪೂರ್ಣಿಮಾ ಶ್ರೀನಿವಾಸ್,   ಜಿ.ಪಂ ಸದಸ್ಯರಾದ ಕೆ.ಗಣೇಶ್, ಮಾಲಾಮಾರುತಿ ಮುಖಂಡರಾದ ಮುನಿರೆಡ್ಡಿ,ಮಹೇಶ್, ಶ್ರೀನಿವಾಸ್, ಜಗದೀಶ್, ಮುನೇಗೌಡ,ರಂಗಪ್ಪ, ಲಕ್ಷ್ಮಿನಾರಾಯಣ ಸ್ವಾಮಿ ಮತ್ತಿತರರು ಹಾಜರಿದ್ದರು.