ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ

234

ಮಂಡ್ಯ/ಮಳವಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಹೊರವಲಯದ ರಾವಣಿರಸ್ತೆಯಲ್ಲಿ ಆದರ್ಶ ವಿದ್ಯಾಲಯದ ಆವರಣದಲ್ಲಿ ನಡೆಸಲಾಯಿತು . ಕಾರ್ಯಕ್ರಮ ವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್ ವಿಶ್ವಾಸ್ ಉದ್ಘಾಟಿಸಿ ಮಾತನಾಡಿ. ಹಿಂದೆ ತಮ್ಮ ಮಕ್ಕಳ ವಿದ್ಯಾಭ್ಯಾಸಗಳ ಬಗ್ಗೆ ತಂದೆತಾಯಿಗಳ ಗಮನ ನೀಡುತ್ತಿರಲಿಲ್ಲ ಆದರೆ ಈಗ ತಂದೆತಾಯಿಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಆಸ್ತಿ ಯನ್ನೇ ಮಾರಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಮೈಕ್ ಅವ್ಯವಸ್ಥೆ ಬಗ್ಗೆ ಕಿಡಿಕಾಡಿದರು. ಈ ಕಾರ್ಯಕ್ರಮ ಕ್ಕೆ ಅವಶ್ಯವಾದ ಮೈಕ್ ನ ಬದಲಿ ವ್ಯವಸ್ಥೆ ಮಾಡದೆ ಇರುವುದು ಬೇಸರ ಸಂಗತಿ ಎಂದರು . ಕಾರ್ಯಕ್ರಮ ದಲ್ಲಿ ಆದರ್ಶ ವಿದ್ಯಾಲಯದ ಎಸ್ ಡಿಎಂಸಿ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಿ . ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಎಂದರು. ಇದೇ ಸಂದರ್ಭದಲ್ಲಿ ವಿವಿದ ಶಾಲೆಯ ಮಕ್ಕಳು ವಿಧ ವಿಧವಾದ ವೇಷಭೂಷಣಗಳನ್ನು ಧರಿಸಿ ಪ್ರದರ್ಶನವನ್ನು ನೀಡಲಾಯಿತು ಕಾರ್ಯಕ್ರಮ ದಲ್ಲಿ ತಾ.ಪಂ ಉಪಾಧ್ಯಕ್ಷ ಮಾಧು, ಕ್ಷೇತ ಶಿಕ್ಷಣಾಧಿಕಾರಿ ಚಂದ್ರಪಾಟೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ನಾಗೇಶ್,ಮಲ್ಲಿಕಾರ್ಜುನ.ಮಹದೇವಯ್ಯ(ಮಧು), ಸತ್ಯವತಿ,ರಘು, ಆನಂದ, ಪುರಸಭೆ ಸದಸ್ಯೆ ಪ್ರೇಮಕಿಟ್ಟಿ,.ಯೋಗೇಶ್, ಸೇರಿದಂತೆ ಮತ್ತಿತ್ತರರು ಇದ್ದರು