ಪರ್ಯಾಯ ಸೂರು ಕಲ್ಪಿಸಲು ಕ್ರಮ…

297

ಬೆಂಗಳೂರು/ಮಹದೇವಪುರ:- ಕ್ಷೇತ್ರದ ಚಿಕ್ಕಬನಹಳ್ಳಿ ಕಾಲೋನಿಯಲ್ಲಿ ಅನಧೀಕೃತವಾಗಿ ಮನೆಗಳನ್ನು ನಿಮರ್ಮಿಸಿಕೊಂಡು ದಶಕಗಳಿಂದಲೂ ವಾಸವಿರುವವರಿಗೆ ಪರ್ಯಾಯ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಅರವಿಂದಲಿಂಬಾವಳಿ ಭರವಸೆ ನೀಡಿದರು. ಮಹದೇವಪುರ ಕ್ಷೇತ್ರದ ಚಿಕ್ಕಬನಹಳ್ಳಿ ಕಾಲೋನಿಯ ಕೆರೆಅಂಗಳದ ಸಮೀಪ ನೂರಾರು ಅನಧಿಕೃತ ಮನೆಗಳಿದ್ದು ಅವುಗಳನ್ನು ತೆರವುಗೊಳಿಸಲು ಇಂದು ತಹಸೀಲ್ದಾರ್ ತೇಜಸ್ಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿದ್ದರು. ತಹಸೀಲ್ದಾರ್ ಅವರೊಂದಿಗೆ ಸ್ಥಳಿಯ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ ತಿಳಿಯದೆ ದಶಕಗಳಿಂದಲೂ ಅವರು ಅಲ್ಲೇ ವಾಸವಾಗಿದ್ದಾರೆ, ಅನಧಿಕೃತವಾದರೂ ಇವರಿಗೆ ಬೇರೆಡೆ ಸೂರು ಕಲ್ಪಿಸುವರೆಗೂ ಮಾನವೀಯತೆ ದೃಷ್ಟಿಯಿಂದ ಖಾಲಿ ಮಾಡಿಸ ಬೇಡಿ ಎಂದು ಹೇಳಿದರು ಇದಕ್ಕೆ ತಹಸೀಲ್ದಾರ್ ತೇಜಸ್ಕುಮಾರ್ ಸಮ್ಮತಿ ಸೂಚಿಸಿದರು. ಇತ್ತೀಚೆಗೆ ನಗರದಲ್ಲಿ ಸುರಿದ ದಾರಕಾರ ಮಳೆಯಿಂದ ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ನಟರಾಜ್, ಮುಖಂಡರಾದ ಪಾಪಣ್ಣ, ಸುರೇಶ್ಬಾಬು, ರಮೇಶ್ ಮತ್ತಿತರರು ಹಾಜರಿದ್ದರು.