ಪೊಸ್ಟ್ ಆಫೀಸ್ ನಲ್ಲಿ ಕಳ್ಳತನಯತ್ನ..?

584

ಬಳ್ಳಾರಿ /ಬಳ್ಳಾರಿ:ಪೊಸ್ಟ್ ಆಪೀಸನಲ್ಲಿದ್ದ ದಾಖಲೆ ಹಾಗೂ ಹಣವನ್ನು ಕಳ್ಳತನ ಮಾಡಲು ಯತ್ನಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಕಂಟೋನಮೆಂಟ್ ಪೊಸ್ಟ್ ಆಪೀಸನಲ್ಲಿ ಇಂದು ನಸುಕಿನ ಜಾವ ಕಳ್ಳರು ಬಾಗಿಲು-ಕೀಲಿ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ, ಮುಂಜಾನೆ ಸಿಬ್ಬಂದಿ ಎಂದಿನಂತೆ ಕೆಲಸಕ್ಕೆ ಆಗಮಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೌಲಬಜಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು, ಪೊಸ್ಟ್ ಆಪೀಸನಲ್ಲಿನ ಬೀರೂಗಳನ್ನು ಒಡೆದು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ ಪರಿಣಾಮ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಕೌಲಬಜಾರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ