ಭಾರತದ ಮಾನವನ್ನು ಹರಾಜು ಹಾಕಿದ ಕಾಂಗ್ರೆಸ್​ ಯುವ ನಾಯಕ ರಾ ಗಾ

215

ಬಾಗಲಕೋಟೆ: ತಮ್ಮ ರಾಜಕೀಯ ಲಾಭಕ್ಕಾಗಿ ಅಮೆರಿಕದಲ್ಲಿ ವಿದ್ಯಾರ್ಥಿಗಳೆದುರು ಭಾರತದ ಮಾನವನ್ನು ಹರಾಜು ಹಾಕಿದ ಕಾಂಗ್ರೆಸ್​ ಯುವ ನಾಯಕ ರಾಹುಲ್​​ ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿದ ಅವರು ರಾಹುಲ್ ಪ್ರಧಾನಿಯಾಗುವುದು ತಿರುಕ ಕಂಡ ಕನಸಿನಂತಿದೆ ಎಂದು ರಾಹಲ್​ ವಿರುದ್ಧ ಕಿಡಿಕಾರಿದ್ದಾರೆ.ಇನ್ನು ಜನ ನಗ್ತಾರೆ ಅನ್ನೋ ಕಾಮನ್ ಸೆನ್ಸ್ ಅವರಿಗಿಲ್ಲ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ತಲೆ ಕೆಟ್ಟಿದೆ. ಅವರದ್ದು ಚೈಲ್ಡ್ ಬಿಹೇವಿಯರ್. ಹಾಗಾಗಿ ಅವರು ಏನ್ ಮಾತಾಡ್ತಾರೋ ಅವರಿಗೆ ಗೊತ್ತಾಗ್ತಾ ಇಲ್ಲ. ಅವರ ಗೌರವವನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಂಬಿಗೆ ವಿನಾಶಕಾಲೇ ಬುದ್ಧಿ ,ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ಸಿದ್ದಗಂಗಾ ಶ್ರೀ ಬಗ್ಗೆ ಎಂ.ಬಿ. ಪಾಟೀಲ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪನವರು ಎಂ.ಬಿ. ಪಾಟೀಲರದ್ದು ವಿನಾಶಕಾಲೇ ವಿಪರೀತ ಬುದ್ಧಿ. ಈ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳ ಹೆಸರು ತರಬಾರದು ಎಂದು ಸಲಹೆ ನೀಡಿದ್ದಾರೆ.ಶ್ರೀಗಳ ಬಗ್ಗೆ ಮಾತನಾಡಿದರೆ ಎಲ್ಲರೂ ಅವರನ್ನ ಖಂಡಿಸುತ್ತಾರೆ. ಅವರು ಮೌನವಾಗಿರುವುದು ಶೋಭೆ ತರುವಂಥದ್ದು, ವೀರಶೈವ ಮಹಾಸಭಾ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ರಾಜಕೀಯವಾಗಿ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.