ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ..

273

ಬಳ್ಳಾರಿ /ಬಳ್ಳಾರಿ:ಶಿಕ್ಷಕರ ದಿನಾಚರಣೆಯ ಅಂಗವಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಬಳ್ಳಾರಿಯ ಸರ್ಕಾರಿ ಕಿವುಡು ಮಕ್ಕಳ ಶಾಲೆಯ ಮುಖ್ಯಗುರುಗಳು ಹಾಗೂ ವಿಶೇಷ ಶಿಕ್ಷಕರಾದ ಹೆಚ್.ಗೋವಿಂದಪ್ಪ ಕುಡುತಿನಿ ಅವರಿಗೆ 2016-17ನೇ ಸಾಲಿನ ಅತ್ಯುತ್ತಮವಿಶೇಷ ಶಿಕ್ಷಕ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ವಿಕಲಚೇತನ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ವಿಕಲಚೇತನ ಮಕ್ಕಳ ಏಳಿಗೆಗಾಗಿ ಹಗಲಿರುಳು
ಶ್ರಮಿಸಿದ ಸೇವೆ ಗುರುತಿಸಿ ಈ ಪ್ರಶಸ್ತಿಯನ್ನು ಬಳ್ಳಾರಿಯ ಎಚ್.ಗೋವಿಂದಪ್ಪ ಅವರಿಗೆ ರಾಷ್ಟ್ರ
ಪ್ರಶಸ್ತಿ ಪುರಸ್ಕೃತ ಬೃಹತ್ ವಿಶೇಷ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳು ನೀಡಿ
ಗೌರವಿಸಿದರು.
ಈ ಸಂದರ್ಭದಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ಸಚಿವರಾದ ಪ್ರಕಾಶ್
ಜವಡೇಕರ್, ಕೇಂದ್ರದ ಮಾನವ ಸಂಪನ್ಮೂಲ ಹಾಗೂ ನೀರಾವರಿ ಸಂಪನ್ಮೂಲ ರಾಜ್ಯ
ಸಚಿವರಾದ ಸತ್ಯಪಾಲ್‍ಸಿಂಗ್, ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವರಾದ
ಉಪ್ಪೇಂದ್ರಕುಶ್ವಾಲ್ ಅವರು ಇದ್ದರು.
ನಂತರ ವಿಶೇಷ ವಾಹನದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರನ್ನು ರಾಷ್ಟ್ರಪತಿ ಭವನಕ್ಕೆ
ಕರೆದೊಯ್ಯಲಾಯಿತು. ರಾಷ್ಟ್ರಪತಿಗಳು ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ
ನಡೆಸಿದರು ಹಾಗೂ ಎಲ್ಲರೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡರು.
ಈ ಪ್ರಶಸ್ತಿಗೆ ದೊರಕಲು ಕಾರಣಿಕರ್ತರಾದ ವಿಕಲಚೇತನ ಇಲಾಖೆಯ ರಾಜ್ಯ
ನಿರ್ದೇಶಕರಿಗೂ, ಜಿಲ್ಲಾಧಿಕಾರಿಗಳಿಗೂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಅಧಿಕಾರಿಗಳಿಗೂ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಪ್ರತ್ಯಕ್ಷ ಮತ್ತು
ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಗೋವಿಂದಪ್ಪ ಅವರು ಕೃತಜ್ಞತೆಯನ್ನು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ