ಯಾತ್ರಿಕ ದೋಣಿ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ

268

ಬಳ್ಳಾರಿ /ಹೊಸಪೇಟೆ:ವಿಶ್ವ ಪ್ರಸಿದ್ಧ ಪಾರಂಪಾರಿಕ ತಾಣ ಹಂಪಿಯಲ್ಲಿ ಪ್ರತಿ ದಿನ ಒಂದಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಲೆ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಯಾತ್ರಿಕ ದೋಣಿ ಸಿಬ್ಬಂದಿಗಳು ಹಂಪಿಯ ಕೋದಂಡ ರಾಮ ದೇವಸ್ಥಾನದಿಂದ ಪುರಂದರ ದಾಸರ ಮಂಟಪದವರೆಗಿನ ನದಿ ದಂಡೆಯಲ್ಲಿ ಬೆಳೆದ ಗಿಡಗಳನ್ನು ಕಿತ್ತು ಸ್ವಚ್ಚಗೊಳಿಸಿದರು. 

ನದಿಯಲ್ಲಿ ನೀರು ಇಲ್ಲದ ಕಾರಣ ಅಲ್ಲಲ್ಲಿ ಬಾರಿ ಪ್ರಮಾಣದ ಗಿಡಗಳನ್ನು ಕಿತ್ತು ಕಸಕಡ್ಡಿಯನ್ನು ತೆಗೆದು ಹಾಕುವ ಮೂಲಕ ಸ್ವಚ್ಛಗೊಳಿಸಿದರು. ನದಿ ದಂಡೆಯಲ್ಲಿ ಬೆಳೆದ ಬಾರಿ ಪ್ರಮಾಣದ ಗಿಡಗಳಿಂದ ಪ್ರವಾಸಿಗರು ಸ್ನಾನ ಮಾಡಲು ಹಾಗೂ ನೀರು ಕುಡಿಯಲು ತೊಂದರೆಯಾಗಿತ್ತು. ಇದನ್ನು ಮನಗಂಡು ಯಾತ್ರಿಕ ದೋಣಿ ಸಿಬ್ಬಂದಿಗಳು ದೋಣಿಗಳ ಮೂಲಕ ಜಲ ಸಸಿಯನ್ನು ಕಿತ್ತು ಸ್ವಚ್ಚಗೊಳಿಸಿದರು. ಅತಿ ಹೆಚ್ಚು ಜಲ ಸಸಿ ಬೆಳೆದರೆ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಖಾಲಿ ಇದ್ದಾಗಲೆಲ್ಲ ನದಿಯಲ್ಲಿ ಹಾಗೂ ದಡದಲ್ಲಿನ ತ್ಯಾಜ್ಯವನ್ನು ಯಾತ್ರಿಕ ದೋಣಿ ಸಿಬ್ಬಂದಿಗಳು ಸೇರಿ ಸ್ವಯಂ ಪ್ರೇರಣೆಯಿಂದ ಸ್ವಚ್ಚಗೊಳಿಸುತ್ತೇವೆ ಎಂದು ಯಾತ್ರಿಕ ದೋಣಿ ಸಿಬ್ಬಂದಿ ಎಲ್.ಪೀರಾನಾಯ್ಕ್ ತಿಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಜಯರಾಮ್, ಹುಲುಗಪ್ಪ, ಸಂತೋಷ್, ವಿರೂಪಾಕ್ಷಿ, ಒಬಳೇಶ್, ದೇವೇಂದ್ರ, ಹನುಮಂತ, ಆನಂದ್ ಸೇರಿದಂತೆ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.