ಬ್ಯಾಂಕ್ ವ್ಯವಸ್ಥಾಪಕರಿಂದ ಪತ್ರಕರ್ತನಿಗೆ ಬೆದರಿಕೆ..!?

437

ಚಾಮರಾಜನಗರ/ಕೊಳ್ಳೇಗಾಲ:ಸ್ಟೇಟ್  ಬ್ಯಾಂಕ್ ನ ಕೊಳ್ಳೇಗಾಲ ಶಾಖೆಯಲ್ಲಿ  ತಪ್ಪು ತಪ್ಪಾಗಿ ಕನ್ನಡ ಪದಬಳಸಿದ್ದನ್ನು ಪ್ರಶ್ನಿಸಿ  ಈ ಸಂಬಂಧ ವರದಿ ಮಾಡಲು ತೆರಳಿ ಪ್ರಶ್ನಿಸಿದ ಪತ್ರಕತ೯ರೊಬ್ಬರ ಮೇಲೆ ಈ ವಿಚಾರ ವರದಿ ಮಾಡಿದರೆ ನಿನ್ನ ವಿರುದ್ದ  ಕೇಸ್  ದಾಖಲಿಸುವುದಾಗಿ ಬೆದರಿಕೆ ಹಾಕಿದ ಬ್ಯಾಂಕ್ ವ್ಯವಸ್ಥಾಪಕ  ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು  ಎಂದು ಆಗ್ರಹಿಸಿ ಶುಕ್ರವಾರ ತಾಲೂಕು ಕಾಯ೯ನಿರತ ಪತ್ರಕತ೯ರ ಸಂಘದ ಹಾಗೂ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ಸಂಘದ ಅದ್ಯಕ್ಷ ಚಿಕ್ಕಮಾಳಿಗೆ,  ಗೌರವಾಧ್ಯಕ್ಷ  ನಟರಾಜು, ನಿಕಟಪೂವ೯ ಅಧ್ಯಕ್ಷ  ನಿಂಪುರಾಜೇಶ್,ಮಾಜಿ ಅದ್ಯಕ್ಷ ಗೋವಿಂದ, ಧಮ೯ರತ್ನಾಕರ್, ರಂಗಸ್ವಾಮಿ, ಮಹೇಶ್ , ಯೂನಸ್  ಹಾಗೂ ಜಿಲ್ಲಾ ಉಪಾಧ್ಯಕ್ಷ ಗುರುಸ್ವಾಮಿ  ಸಮ್ಮುಖದಲ್ಲಿ ಕನ್ನಡಕ್ಕೆ ಅಪಮಾನ ಎಸಗಿದ್ದು ಅಲ್ಲದೆ ಪ್ರತಿಕ್ರಿಯೆ ಕೇಳಲು ತೆರಳಿದ ಪತ್ರಕ೯ನ ಮೇಲೆ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿದ  ಘಟನೆಯನ್ನು ಸಾಮಾನ್ಯ ಸಭೆಯಲ್ಲಿ ಖಂಡಿಸಲಾಯಿತು.

ಅಲ್ಲದೆ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಲು ಹಾಗೂ  ಪ್ರತಿಭಟನೆಗೆ ಸಂಘ ಸಂಸ್ಥೆಗಳ  ಪದಾಧಿಕಾರಿಗಳ ಸಹಕಾರ ಕೋರಲು ನಿಣ೯ಯಿಸಲಾಯಿತು.
ಈಹಿನ್ನೆಲೆ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಆಗಮಿಸಿ ಬ್ಯಾಂಕ್  ಒಳಾಂಗಣದಲ್ಲಿ  ಚೆಕ್ಕುಗಳು ಎಂಬ ಬದಲಿಗೆ ಚಕ್ಕಗಳು ಎಂದು ನಮೂದಿಸಿ
ಕನ್ನಡಕ್ಕೆ ಅಪಮಾನ ಎಸಗಿದ  ಹಾಗೂ ವರದಿ  ಮಾಡಲು ತೆರಳಿದ ಸಂಘದ ಅದ್ಯಕ್ಷ ಚಿಕ್ಕಮಾಳಿಗೆ ಅವರಿಗೆ ಬೆದರಿಕೆ ಹಾಕಿ ಕೇಸ್ ದಾಖಲಿಸುವ ಬೆದರಿಕೆ ಹಾಕಿದ ಬ್ಯಾಂಕ್
ವ್ಯವಸ್ಥಾಪಕರನ್ನು  ಬೇರೆಡೆ ವಗಾ೯ಯಿಸಬೇಕು, ಕನ್ನಡಕ್ಕೆ ಅಪಮಾನ ಮಾಡಿದ ಅವರನ್ನು ಕತ೯ವ್ಯದಿಂದ ಅಮಾನತುಗೊಳಿಸಬೇಕು ಎಂದು
ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈಸಂದಭ೯ದಲ್ಲಿ  ರೈತ ಮುಖಂಡ ಕುಂತೂರು ಪುಟ್ಟರಾಜೇ ಅರಸು ಮಾತನಾಡಿ, ಪತ್ರಿಕಾ ಸ್ವಾತಂತ್ಯವನ್ನು ಬ್ಯಾಂಕ್ ಮ್ಯಾನೇಜರ್ ಕಸಿಯುವ  ಪ್ರಯತ್ನ ಮಾಡಿದ್ದಾರೆ.
ಕನ್ನಡದಲ್ಲಿ ತಪ್ಪಾಗಿ ಬರೆದಿರುವ ಕುರಿತು ಗಮನ ಸೆಳೆದವರನ್ನೆ ಬೆದರಿಕೆ ಹಾಕುವುದು ಸರಿಯಾದ ಕ್ರಮವಲ್ಲ, ಆಗಾಗಿ ವ್ಯವಸ್ಥಾಪಕ ಅಖಿಲ್ ಪ್ರಧಾನ್
ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಕ್ಷಣಾ ವೇದಿಕೆ ಅದ್ಯಕ್ಷ ಮಹಮ್ಮದ್ ಮತೀನ್ ಮಾತನಾಡಿ, ರೈತ ಸಂಘದ ಶೈಲಕುಮಾರ್ ಮಾತನಾಡಿ,  ಕನ್ನಡಕ್ಕೆ ಅಪಮಾನ ಎಸಗುವ ಹಾಗೂ ಕನ್ನಡ ದ್ರೋಹಿ ನೀತಿ ಪ್ರದಶಿ೯ಸುವ ಇಂತಹ ವ್ಯವಸ್ಥಾಪಕರನ್ನು
ರಾಜ್ಯದಿಂದ ಹೊರಕಳುಹಿಸಬೇಕು, ಮಾದ್ಯಮದ  ಹಕ್ಕು ಕಸಿಯುವುದು ನೈತಿಕತೆ ಯಾರಿಗೂ ಇಲ್ಲ, ಅವರೊಂದಿಗೂ
ಉದ್ದಟ ವತ೯ನೆ ಸರಿಯಲ್ಲ,  ಕನ್ನಡಕ್ಕೆ ಅಪಮಾನ ಎಸಗಿದ ಇಂತಹ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ
ಪ್ರಕರಣ ದಾಖಲಿಸಬೇಕು, ಉದ್ದಟವಾಗಿ ವತಿ೯ಸಿ ರೈತರು, ಸಾವ೯ಜನಿಕ ಸೇವೆ ಮರೆತ ಬ್ಯಾಂಕ್ ಅಧಿಕಾರಿ ವಿರುದ್ದ ಶಿಸ್ತು ಕ್ರಮಕೈಗೊಳ್ಳಬೇಕು,
ಸ್ಥಳಕ್ಕೆ ಎಜಿಎಂ ಆಗಮಿಸಬೇಕು ಎಂದು  ಆಗ್ರಹಿಸಿದರು.
ಸ್ಥಳಕ್ಕೆ  ಎಜಿಎಂ ಸಹಾಯಕ ಅಧಿಕಾರಿ ಜೋಷಿ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು.   ಮೇಲಾಧಿಕಾರಿಗಳಿಗೆ ಈಸಂಬಂಧ ವರದಿ ಸಲ್ಲಿಸುತ್ತೆನೆ, ತಪ್ಪಿತಸ್ಥ
ಬ್ಯಾಂಕ್ ಮ್ಯಾನೇಜರ್ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡುತ್ತೆನೆ ಎಂದು ಲಿಖಿತ ರೂಪದಲ್ಲಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಈಸಂದಬ೯ದಲ್ಲಿ   ಜಿಲ್ಲಾ ಉಪಾಧ್ಯಕ್ಷ ಕೋಟಂಬಳ್ಳಿ ಗುರುಸ್ವಾಮಿ,  ಉಪಾಧ್ಯಕ್ಷರುಗಳಾದ ಮರಿಸ್ವಾಮಿ, ಮಂಗಲ ಲಿಂಗರಾಜು, ಮಾಜಿ ಅದ್ಯಕ್ಷರುಗಳಾದ
ವಿ.ನಾಗಾಚಾರಿ, ಡಿ.ನಟರಾಜು,ಪ್ರಧಾನ ಕಾಯ೯ದಶಿ೯ ಯಡದೊರೆ ಮಲ್ಲಪ್ಪ,
ಎಸ್. ರಾಜು,  ಡಿ. ಸೋಮು(ಮರಿಸ್ವಾಮಿ), ಪೊನ್ನಾಚಿ ಬಂಗಾರಪ್ಪ,  ಸತ್ತೇಗಾಲ ರಾಜಶೇಖರ್, ಬಸಂತಮೊಟಾಯ್,  ರಾಜೇಂದ್ರಕುಮಾರ್, ಜಾನ್ ಪೀಟರ್,  ಎನ್.ನಾಗೇಂದ್ರಸ್ವಾಮಿ, ಹಂಪಾಪುರ ಸಿದ್ದರಾಜು,
ಸತೀಶ್, ಸಂಗಂ ಗೀರೀಶ್, ತಿರುಮಲ್ಲೇಶ್, ಕುಣಗಳ್ಳಿ ರಂಗಸ್ವಾಮಿ,   ರೈತ ಮುಖಂಡರುಗಳಾದ  ಶೈಲೇಂದ್ರ, ಕುಂತೂರು ಪುಟ್ಟರಾಜೇ ಅರಸು, ರಕ್ಷಣಾ ವೇದಿಕೆ
ಅಧ್ಯಕ್ಷ ಮಹಮ್ಮದ್ ಮತೀನ್, ಜಯಕನಾ೯ಟಕ ಸಂಘಟನೆಯ ಪ್ರಭುಸ್ವಾಮಿ, ಪುಟ್ಟಬುದ್ದಿ, ಮಾಜಿ ನಗರಸಭೆ ಸದಸ್ಯ ಚಂದ್ರಶೇಖರ್, ಛಲವಾದಿ ಸಂಘಟನೆಯ
ಜಿಲ್ಲಾಧ್ಯಕ್ಷ ಅಣಗಳ್ಳಿ ಬಸವರಾಜು , ಬಿಎಸ್ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್,ಜಕಾವುಲ್ಲಾ, ಸೋಮಣ್ಣ ಉಪ್ಪಾರ್, ಪತ್ರಿಕಾ ವಿತರಕ ಸಂಘದ ಅಧ್ಯಕ್ಷ ಮುರುಳಿ,
ಅಣಗಳ್ಳಿ ದಶರತ್,  ದಸಂಸ ಸಂಘಟನೆಯ ಲಿಂಗರಾಜು, ತೇರಂಬಳ್ಳಿ ಕುಮಾರಸ್ವಾಮಿ ಇನ್ನಿತರರು ಇದ್ದರು