ಬಸ್ ನಿಲ್ಲಿಸದಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಗೈರು

355

ಬಳ್ಳಾರಿ /ಹೊಸಪೇಟೆ:ಬಸ್ ಪಾಸ್ ಪಡೆದ ಮಕ್ಕಳನ್ನು ಹತ್ತಿಸಿಕೊಳ್ಳಬೇಕಾಗುತ್ತದೆಂದು ಕೆಲ ಬಸ್‌ಗಳು ಕೊಂಡನಾಯಕನಹಳ್ಳಯಲ್ಲಿ ನಿಲ್ಲಿಸದೆ ಹೊರಡುತ್ತವೆ. ಈಗಾಗಿ ನಿತ್ಯ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆ ಸೇರದ ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಸಿ ವಿಕಲಚೇತನರ ಸಂಘ ಹಾಗೂ ವಿದ್ಯಾರ್ಥಿಗಳ ತಹಸೀಲ್ದಾರ್ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿಕಲಚೇತನರ ಸಲಹೆಗಾರ ಎನ್.ವೆಂಕಟೇಶ ಮಾತನಾಡಿ, ತಾಲೂಕಿನ ಕೊಂಡನಾಯಕನಹಳ್ಳಿಗೆ ನೂರಾರು ಬಸ್‌ಗಳು ಸಂಚರಿಸುತ್ತಿದ್ದರೂ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿಲ್ಲ. ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಳು ಶಾಲಾ ಕಾಲೇಜ್‌ಗಳಿಗೆ ತೆರಳುತ್ತಿದ್ದಾರೆ. ಆದರೆ ಶಿಕ್ಷಣ ಕಲಿಯಲು ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಸಕಾಲಕ್ಕೆ ತೆರಳಲು ಬಸ್ ಸೌಲಭ್ಯಗಳನ್ನು ಕಲ್ಪಿಸಿಲ್ಲಿ. ನಿತ್ಯ ನಾನಾ ಶಾಲಾ ಕಾಲೇಜ್‌ಗಳಿಗೆ ವಿದ್ಯಾರ್ಥಿಗಳು ನಾಲ್ಕಾರು ಕಿ.ಮೀ ದೂರ ನಡೆಯುವುದು ತಪ್ಪಿಲ್ಲ. ನಗರ ಸಾರಿಗೆಯ ಬಸ್‌ಗಳಲ್ಲಿ ಮಕ್ಕಳು ಸೀಟ್‌ಗಳಲ್ಲಿ ಕೂತುಕೊಂಡರೆ, ಬೈದು ಎಬ್ಬಿಸಿ ನಿಲ್ಲಿಸುತ್ತಾರೆ, ಮಕ್ಕಳು ರಿಯಾಯಾತಿ ಧರದಲ್ಲಿ ಪಾಸ್ ಪಡೆದು ಸಂಚರಿಸಿದರೂ ಪುಕ್ಸಟ್ಟೆ ಎಂಬ ಭಾವನೆ ನಿರ್ವಾಹಕರಲ್ಲಿರುವುದು ವಿಷಾಧನೀಯ. ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆಂದರೆ ಹಿಂದೆ ಬಸ್ಸ ಯಿದೆ ಹತ್ತಿಕೊಳ್ಳಿ ಎಂದು ಬಸ್‌ಗಳನ್ನು ನಿಲ್ಲಿಸದೆ ಹೊರಡುತ್ತಾರೆ. ಇಂತಹ ಮಾತುಗಳನ್ನು ಪ್ರತಿ ಬಸ್‌ಗಳ ನಿರ್ವಾಹಕರಿಂದ ಕೇಳಿ ಶಾಲೆಗೆ ಹೋಗುವ ಬದಲು ಮನೆಗೆ ಮರುಳವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ವಿದ್ಯಾರ್ಥಿಗಳಿದ್ದಲ್ಲಿ ಸಾರಿಗೆ ಬಸ್‌ಗಳನ್ನು ನಿಲ್ಲಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು. ಸೋಮವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕೊಂಡನಾಯಕನಹಳ್ಳಿಯಲ್ಲಿ ಗ್ರಾಮಸ್ಥರ ಜೊತೆಗೂಡಿ ರಸ್ತೆ ತಡೆಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿಕಲಚೇತನರ ಮುಕ್ಕಣ್ಣ ಜಿ. ಕೆ., ರಾಜಾಸಾಬ್, ಜಿ. ಅಂಜಿನಿ, ಸಲಹೆಗಾರ ಎನ್. ವೆಂಕಟೇಶ, ನಾಣಿಕೇರಿ ಸದಾಶಿವ, ಅರುಣಕುಮಾರ, ವಿ.ವೆಂಕಟೇಶ, ಪರಶುಮರಾಮ, ಹುಲಿಗೆಪ, ರಾಜಶೇಖರ, ನಾಗರಾಜ, ರಮೇಶ, ಶೇಖ್ ಮೆಹಬೂಬ್ ಬಾಷ, ಕೊಂಡನಾಯಕನಹಳ್ಳಿ ಶಾಲೆಯ ಮಾಜೀ ಎಸ್.ಡಿ.ಎನ್.ಸಿ. ಮಾಜೀ ಅಧ್ಯಕ್ಷ ದೌಲ್ ಮಲ್ಲಿಕ್, ಯುವಕ ಸಂಘದ ಪರಶುರಾಮ, ರಘು, ಕೊಟ್ರೇಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು