ಕಾನೂನು ಬದಲಾದರೆ ದೇಶದಲ್ಲಿ ಬದಲಾವಣೆ ಸಾಧ್ಯ….!

335

ಬಳ್ಳಾರಿ /ಹೊಸಪೇಟೆ,-ಬದಲಾಗುತ್ತಿರುವ ಕಾಲಘಟ್ಟದಲ್ಲಿ ದೇಶದ ಅಭಿವೃದ್ಧಿಗೆ ಕೇಂದ್ರವು ಕಾನೂನು ಬದಾವಣೆ ಮಾಡಿದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗಲಿದೆ ಎಂಬ ಸದಾಶಯದಿಂದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸಪೇಟೆಯಲ್ಲಿ ಎಸ್.ಎಸ್.ಕೆ. ತರುಣ್ ಸಂಘ ಮೋದಿ ಹುಟ್ಟುಹಬ್ಬ ದ ನಿಮಿತ್ತ ಆಯೋಜಿಸಿದ್ದ ಸೇವಾ ದಿನದ ಸ್ವಚ್ಛ ಭಾರತ್ ಆಂದೋಲನ ಇತ್ಯಾದಿ ಜನೋಪಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು.

ದೇಶದ ಪ್ರಧಾನಿ ಸಾಮಾನ್ಯನಲ್ಲ. ಅಸಾಮಾನ್ಯವಾದ ವ್ಯಕ್ತಿ. ಅಧಿಕಾರವಿದ್ದಾಗ ಏನು ಬೇಕಾದರೂ ಸಂಪಾದಿಸಿಕೊಳ್ಳಬಹುದು. ಆದ್ರೆ, ಮೋದಿ ಅವರು ದೇಶದ ಹಿತಚಿಂತನೆಗಾಗಿ ದಿನದ 24 ಗಂಟೆಯೂ ದುಡಿಯುತ್ತಿದ್ದಾರೆ. ತಮ್ಮ ಸ್ವಹಿತಾಸಕ್ತಿಯನ್ನೇ ಮರೆತು ಹಗಲಿರುಳೂ ದೇಶದ ಭವಿತವ್ಯದ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸದಾ ಯುವಜನರ ಏಳ್ಗೆಗಾಗಿ ಹಪಹಪಿಸುತ್ತಿದ್ದಾರೆ. ಯುವಕರಿಗೆಲ್ಲ ಉದ್ಯೋಗಾವಕಾಶಗಳನ್ನು ನೀಡುವುದು ಹೇಗೆ? ಎಂಬ ಪ್ರಯತ್ನದಲ್ಲಿದ್ದಾರೆ. ವಿಶ್ವದ ಉದ್ದಗಲಕ್ಕೂ ಸಂಚರಿಸಿ ದೇಶದ ಘನತೆ ಕಾಪಾಡಲು ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಪ್ರಗತಿ ಸಾಧಿಸುತ್ತಿದ್ದಾರೆ.

ಇಂತಹ ಪ್ರಧಾನಮಂತ್ರಿ ಗಳನ್ನು ಪಡೆದಿರುವ ಭಾರತೀಯರು ನಿಜಕ್ಕೂ ಅದೃಷ್ಟವಂತರು.

ಕಾಂಗ್ರೆಸ್ ನಾಯಕರು ಮಾತ್ರ ಪ್ರಧಾನಮಂತ್ರಿ ಆದಕೂಡಲೇ ಮೋದಿ ಅವರು ವಿಸ್ತೃತ ಅಭಿವೃದ್ಧಿ ಸಾಧಿಸಬೇಕೆನ್ನುವ ಮಾತುಗಳನ್ನಾಡುತ್ಯಿದ್ದಾರೆ. ಕಡಿಮೆ ಅವಧಿಯಲ್ಲಿ ದೇಶ ಬದಲಾವಣೆ ಮಾಡಲು ಸಾಧ್ಯವೇ? ಅವರ ಕುರಿತು ಭಯಗೊಂಡು ವಿರೋಧಿಗಳು ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮೋದಿ ಅವರ ವೈಚಾರಿಕತೆ, ಶಕ್ತಿ, ಆಲೋಚನೆಯ ಲಹರಿಯಲ್ಲಿ ವಿರೋಧ ಪಕ್ಷಗಳ ನಾಯಕರು ಕಳೆದುಹೋಗುವ ಭಯದಲ್ಲಿ ತಲ್ಲಣಗೊಂಡಿದ್ದಾರೆ ಎಂದರು.

ಬಿಜೆಪಿ ಮುಖಂಡರಾದ ಮೋಹನ್ ಸಾ ಮೆರೆವಾಡಿ, ಎಸ್ ಎಸ್ ಕೆ ಸಮಾಜದ ತರುಣರ ಸಂಘದ ಆಧ್ಯಕ್ಷ ರಾಮಚಂದ್ರ, ಸಾ ರಂಗರೇಜ್ ಪ್ರಕಾಶ್, ಮೇರವಾಡೆ ರಮೇಶ್, ನಾಗನಾಥ್ ರಾಯಬಾಗಿ, ಶ್ರೀ ನಿವಾಸ್, ಕಿರಣ್,ಮೇರವಾಡೆ ಪರಶುರಾಮ್, ಬಿಎಸ್ ಜಂಬಯ್ಯ ನಾಯಕ ಇನ್ನಿತರರು ಇದ್ದರು.

ಫ್ಲೋ…

ಬೈಟ್: ಬಿಎಸ್ ಆನಂದ್ ಸಿಂಗ್, ಶಾಸಕರು ವಿಜಯನಗರ ಕ್ಷೇತ್ರ.