ವಿಷ್ಣುವರ್ಧನ್ ರ ೬೭ ನೇ ಹುಟ್ಟುಹಬ್ಬ ಆಚರಣೆ

191

ಬೆಂಗಳೂರು/ಕೆಆರ್ ಪುರ:- ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ೬೭ ನೇ ಹುಟ್ಟುಹಬ್ಬವನ್ನು ರಾಜ್ಯದ್ಯಾಂತ ಅವರ ಅಭಿಮಾನಿಗಳು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದ, ಇತ್ತ ಬೆಂಗಳೂರಿನ ಕೆ‌.ಆರ್.ಪುರದಲ್ಲಿ ಡಾ. ವಿಷ್ಣು ಸೇನೆ ಸೇವೆಯ ಸೇನೆ ವತಿಯಿಂದ ಸಿಹಿ ಹಂಚುವ ಮೂಲಕ ಆಚರಿಸಲಾಯಿತು. ಕೆ‌ಆರ್ ಪುರದ ವೆಂಗಯ್ಯನ ಕೆರೆ ಬಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ರವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಸಮಾಜ ಸೇವಕ ಎಲ್ ಮುನಿಸ್ವಾಮಿ, ನಾಮಿನೇಟೆಡ್ ಕಾರ್ಪೋರೇಟರ್ ಅಂತೋನಿ ಸ್ವಾಮಿ, ಎಲ್ ಐ ಸಿ ವೆಂಕಟೇಶ್ ಶಂಕುಸ್ಥಾಪನೆ ನೆರವೇರಿಸಲಾಯಿತು. ೧೦ ಲಕ್ಷ ರೂ ವೆಚ್ಚದಲ್ಲಿ ೯ ಅಡಿ ಎತ್ತರದ ವಿಷ್ಣು ಪುತ್ಥಳಿ ಯನ್ನು ನಿರ್ಮಿಸುವುದಾಗಿ ವಿಷ್ಣು ಅಭಿಮಾನಿಗಳು ತಿಳಿಸಿದ್ದಾರೆ. ಪೂರ್ವ ತಾಲ್ಲೂಕಿನ ಏಲ್ಲಾ ವಿಷ್ಣು ವರ್ಧನ ಅಭಿಮಾನಿಗಳು ಸೇರಿ ಕೆ.ಆರ್.ಪುರದ ವೆಂಗಯ್ಯನ ಕೆರೆ ಬಳಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಹೆಚ್ಚಿನ ನಟನ ಜನ್ಮದಿನ ಆಚರಿಸಿದ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಡಾ” ವಿಷ್ಣು ಸೇನೆ ಸೇವೆಯ ಸೇನೆ ಮುಖ್ಯಸ್ಥ ಬಾಬು, ಕೆ.ಸಿ ಕೆಂಪನ್ನ, ಬಟ್ಟರಹಳ್ಳಿ ದಿಲೀಪ್, ಶ್ರೀನಿವಾಸ್, ರಾಜು, ಹುವ್ವಂಗಡಿ ಕಿರಣ್, ಬಸವರಾಜು, ಅಫ್ರೋಜ್.
ಸ್ಥಳೀಯ ಕಾಂಗ್ರೆಸ್‌ ಮುಖಂಡರು ಎಂ.ಮಂಜುನಾಥ್, ಮೇಡಿಹಳ್ಳಿ ರಾಕೇಷ್ ಮುಂತಾದವರು ಹಾಜರಿದ್ದರು.