ಹೃದಯಾಘಾತದಿಂದ ಪೌರಾಯುಕ್ತ ಸಾವು.

195

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ : ಕಳೆದ ಒಂದು ವರ್ಷದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪೌರಾಯುಕ್ತ ಬಿಳಿ ಕೆಂಚಪ್ಪ ಬೆಳಗಿನ ಜಾವ ಹೃದಯಾಘಾತದಿಂದ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ವತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನೆನ್ನೆ ಸಂಜೆ ೭ ಗಂಟೆ ವರೆಗೂ ನಗರಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬೆಂಗಳೂರಿನ ನಿವಾಸಕ್ಕೆ ತೆರಳಿದ್ದ ಪೌರಾಯುಕ್ತರಿಗೆ ಬೆಳಗಿನ ಜಾವ ಹೃದಯಾಘಾತವಾಗಿದ್ದು ಕೂಡಲೆ ಎಂಎಸ್ ರಾಮಯ್ಯ ಆಸ್ವತ್ರೆಗೆ ಕರೆದೂಗಿದ್ದಾರೆ. ಆದ್ರೆ ಅಷ್ಟೋತ್ತಿಗಾಗಲೆ ತೀವ್ರ ಹೃದಯಾಘಾತವಾಗಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಆಸ್ವತ್ರೆಯಲ್ಲಿ ಸಾವನ್ನಪಿದ್ದಾರೆ. ಇನ್ನೂ ಪೌರಾಯುಕ್ತರ ಅಕಾಲಿಕ ಮರಣಕ್ಕೆ ಸ್ಥಳಿಯ ಶಾಸಕರು, ನಗರಸಭೇ ಸದಸ್ಯರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.